ಬುಧವಾರ, ಜೂನ್ 28, 2017

ಹುಡುಗಿ ಮತ್ತು ಮಡಕೆಯ ಸಂವಾದ



ಕೈಯೆಲ್ಲ ಮೆತ್ತಿರುವೆ
ಕನಸೊಂದ ಹೊಸೆದಿರುವೆ...
ನಿನ್ನಲ್ಲೆ ನಾನಾಗಿ
ಹೊಸ ರೂಪ ಕೊಡುತಿರುವೆ


ನಿರ್ಜೀವ ನನ್ನ ಬಾಳು
ನೀರನ್ನೇ ಕುಡಿದಿರುವೆ
ಯಂತ್ರಕ್ಕೆ ಮನ ಮಿಡಿದು
ಮಡಕೆಯ ರೂಪ ತಾಳುತಿರುವೆ

ಆಕಾರ ಬಂದಾಯ್ತು
ಮೃದುವಾಗಿ ಹೊರತರುವೆ
ನಿನ್ನೊಳಗಿರಿಸುವದೆಲ್ಲವ ತಂಪಿರಿಸಲು
ಕಾಯಿಸಿ ಬಿಸಿ ಮುಟ್ಟಿಸುವೆ

ನನಗೊಂದು ಬಾಳ್ಕೊಡುವ
ಹುಡುಗಿಯೇ
ಹಸನಾಗಿರುವ ಬಾಳ್ವೆಯ
ನಾ ಕೊಡುವೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ