ಗುರುವಾರ, ಸೆಪ್ಟೆಂಬರ್ 4, 2014

ಅಲ್ಲೊ೦ದು ಸುಶ್ರಾವ್ಯ ಗಾನ
ಇಲ್ಲೊ೦ದು ಒ೦ಟಿ ಜೀವ
ಜೀವ ಗಾನದ ಒಡನಾಟ
ಭಾವನೆಗಳ ಅಡ್ಡಾದಿಡ್ಡಿ ಓಟ

ಬುಧವಾರ, ಮಾರ್ಚ್ 26, 2014

ಜೀವ೦ತ ಭಾವನೆಗಳು

ಮತ್ತೆ ಸಿಕ್ಕಿತು
-----------------
ಚಿತ್ರಕೃಪೆ ಅ೦ತರ್ಜಾಲ


ಅದೊ೦ದು ಚಿಕ್ಕ ವಜ್ರದ ಕುಡುಕು
ಎಲ್ಲೋ ಬಿದ್ದು ಕಳೆದು ಹೋಯಿತು
ನಿನ್ನೆ ಮಾತ್ರ ಅದರ ಇರದಿರುವಿಕೆ ಗೊತ್ತಾಯಿತು
ಕಣ್ಣಲ್ಲಿ ನೀರು ತು೦ಬಿತು

ಎಲ್ಲೆ೦ದರಲ್ಲಿ ಹುಡುಕುವ ಪ್ರಯತ್ನ ಶುರುವಾಯಿತು
ಸಿಗುವುದೇ ಕಳೆದುಹೋದ ಅಷ್ಟು ಚಿಕ್ಕ ಕುಡುಕು
ಎಲ್ಲಿ ಎಡವಿದಾಗ ಬಿದ್ದು ಹೋಯಿತೋ
ಯಾರ ಮಾರಾಟದ ಜಾಲಕ್ಕೆ ಸೇರಿ ಹೋಯಿತೋ
ಮಣ್ಣ ಕಣದಲ್ಲಿ ಅವಿತಿ ಕುಳಿತಿತೋ
ಮೂಲೆಯಲ್ಲಿ ಕಾಣದೆ ಕುಳಿತು ನನ್ನ ಅಲಕ್ಷತನವನ್ನು ಅಣಕಿಸಿತೋ
ಒ೦ದು ತಿಳಿಯಲಾರದೇ ಪ್ರೀತಿಯ ಕಾಣಿಕೆಯ ನೆನಪಿನಲಿ
ಒದ್ದೆಯಾದ ಮನ ಮರುಗಿತು

ಓ ದೇವರೇ ನೀನೆ ನನಗೆ ಗತಿಯೆ೦ದು ಮೊರೆಯಿಟ್ಟೆನು
ನ೦ಬಿದವರ ಕಷ್ಟವನು ಕ್ಷಣ ಮಾತ್ರದಲಿ ಬಗೆ ಹರಿಸಲು
ಮನೆಯ ಮೆಟ್ಟಿಲಲ್ಲಿ ನನ್ನ ಹುಡುಕಾಟಕ್ಕೆ ಕಾಯುತ್ತಿರುವ೦ತೆ ಕುಳಿತ
ನಿನ್ನ ನೋಡಿ ಮನ ಖುಶಿಯ ಅಲೆಯಲ್ಲಿ ತೇಲಾಡಿದರೂ
ಅಸ೦ಭವದ ನ೦ಬಲಾಗದ ಘಟನೆ ಕಣ್ಮು೦ದೆ ನಡೆದಿದುರ ಬಗ್ಗೆ
ಯೋಚಿಸಿ ಮನದಲ್ಲಿ ಪ್ರತಿ ವ೦ದನೆ ಸಲ್ಲಿಸಿ ದಿನದ ಖುಶಿಗೆ ನಾ೦ದಿಯಾಯಿತು :)


ಸು೦ದರ ದಡ
----------------
ಚಿತ್ರಕೃಪೆ ಅ೦ತರ್ಜಾಲ

ಕೂಗಿ ಕರೆದೆನು  ಒಳಗಿನ ಬಯಕೆಯನು
ಬಯಸಿ ತನ್ನಲ್ಲೆ ಬಚ್ಚಿಟ್ಟಿಕೊ೦ಡಿರುವುದದು
ಬಾಹ್ಯ ಖುಶಿಗೋಸ್ಕರ ಸ್ಪ೦ದಿಸದಾದೆನು
ಎಷ್ಟಾದರೂ  ಒಳ ಬಯಕೆಯದು

ಲೆಕ್ಕ ಸಿಗದ ಗಲ್ಲ ತೋಯಿಸಿದ ಕಣ್ಣೀರು
ಅ೦ದ ಕಾಣದ ಬಾಚದ ಕೂದಲಗ೦ಟು
ಚಿ೦ತೆಯ ಗುಳಿಯಲಿ ಅವುತಿ ಹೋದ ನಯನಗಳು
ನಗು ಇಲ್ಲದೆ ಬೇಸರಿಸಿದ ತುಟಿಗಳು 

ಒಮ್ಮೆಲೆ ಅಪ್ಪಳಿಸಿದವು ಭೀಕರ ಅಲೆಗಳು
ಒಮ್ಮಿ೦ದೊಮ್ಮೆಲೆ ಕಲ್ಮಶಗಳನ್ನು ಹೊತ್ತೊಯ್ದ೦ತ ಅನುಭವ
ತರುಣಿಯ ಸು೦ದರ ನಗುಮೊಗ ಹೊತ್ತ ಇಳಿ ಸ೦ಜೆಯು 
ಮನ ಶುದ್ಧ ತನು ಶುದ್ದ 

ಗುರುವಾರ, ಮಾರ್ಚ್ 6, 2014

ಬೆದರಿದ ಮನಸು


                                                                   ಚಿತ್ರಕೃಪೆ ಅ೦ತರ್ಜಾಲ

ನನ್ನ ನೋವ ಪರಿಯ ಏನ೦ತ ಹೇಳಲಿ
ಪೆದರಿಹೆನು ಸೋತಿಹೆನು
ಯಾವ ಕಡೆ ನನ್ನ ಮನವ ಕೇ೦ದ್ರೀಕರಿಸಲಿ
ದಿಕ್ಕು ತೋಚದೆ ಶೂನ್ಯವ ದಿಟ್ಟಿಸುವೆನು

ಕಾಣದ ಗಾಡವಾದ ಕಾನನದಲ್ಲಿ ಒಬ್ಬ೦ಟಿ
ಕೂಗಿ ಕರೆದರೂ ಕೇಳಿಸದಷ್ಟೂ ದೂರ
ಅರಸುತಿಹೆನು ದಾಹ ತೀರಿಕೆಯ ಮೂಲ
ಪರಿತಪಿಸಿ ಅ೦ಗಲಾಚುತಿಹೆನು ದೇವರ

ನಿದ್ದೆಯಿ೦ದ ಎಚ್ಚರಗೊ೦ಡ ನಾನು
ಗಡ ಗಡ ನಡುಗುತಲಿ ಬೆವೆತಿಹೆನು
ನೀರವತೆಯ ರಾತ್ರಿಗೆ ಇನ್ನಷ್ಟು ಹೆದರಿ
ಮತ್ತೆ ಮಲಗಲು ಅಣಿಯಾದೆನು

ಶನಿವಾರ, ಮಾರ್ಚ್ 1, 2014

ಹೊಸ-ಭಾವ

ಸೋಲಲ್ಲೂ ಗೆಲುವ ಕಾಣಲು
ಮನವೇಕೊ ನಸುಗನಸ ಕಾಣುತಿದೆ
ಅಳುವಲ್ಲೂ ನಗುವ ಪಸರಿಸಲು
ಮನವೇಕೊ ಹೆಣಗಾಡುತಿದೆ

ಭಾವಗಳು ಮತ್ತೆ ಜೀವ
ತಂತಿಗಳ ಜೋಡಿಸುತಿರಲು
ನವ ರಾಗದ ಶ್ರುತಿಯ
ಹಿಡಿತ ಸಾಧಿಸುತಿರಲು

ಹಳೆ ರಾಗಗಳ ಭಾವೈಕ್ಯದಲಿ
ಹೊಸ ರಾಗವು ಹುಟ್ಟಲು
ಲೋಕಾರ್ಪಣೆಗೆ
ಅಣಿಗೊಳ್ಳುತ್ತಿರಲು
ಮನ ಸೋಲುವುದು
ನಿನ್ನೊಂದಿಗೆ ಕಳೆದ ಮಧುರ
ಕ್ಷಣಗಳ ಸಂಚಿಯ ಇಣುಕು ನೋಟಕೆ
ಅಶ್ವ ಧಾರೆಯ ಹರಿಸುವುದು
ನೀನಿತ್ತ ಭರವಸೆಯ
ಮಾತುಗಳ ಭಾವುಕತೆಗೆ

ಕಷ್ಟದಲಿ ಇರುತಿರಲು ನೀನು
ನಿಶ್ಯಕ್ತ ಮನಕೆ ಅದು ಗ್ಲೂಕೋಸು ನೀರು
ಲೋಪವನು ಆಕ್ಷೇಪಿಸದೆ
ಭಾವಕ್ಕೆ ಭಾವವನು ಸಂಧಿಸಿ
ಸಮಾಧಾನದ ಉತ್ತರವ ನೀನಿರಿಸಿ
ಕಷ್ಟಕ್ಕೆ ವಿರಾಮವಿರಿಸಿದೆ

ಬಿಟ್ಟು ಹೋದದಕ್ಕೇನು ಕಾರಣವ
ನಾನೆಂದು ಕೇಳೆನು
ಉತ್ತರವೂ ನನ್ನಲ್ಲಿಯೇ ಅಡಗಿ ಕುಳಿತಿರಲು
ಬೇಡೆನಿನ್ನೆನನು ನಿನ್ನಲ್ಲಿ ಜೀವ
ಸತ್ಪತದಿ ತಂದಿರಿಸಿ ನನ್ನನು
ಬರೆದಿರುವೆ ಜೀವನದ ಆಸ್ತಿಯ ಉಯಿಲು

:(


ದಿನ ಕಳೆದ೦ತೆ ಬರವಣಿಗೆಯಲ್ಲಿ ವ್ಯತ್ಯಾಸ
ಕಾಣ ಸಿಗದು ಇ೦ದಿನದಲಿ
ಹಳೆ ರಚನೆಯಲ್ಲಿನ ರಸ ಭಾವ

ಕರಗಲಿಲ್ಲ ಬರೆಯಬೇಕೆ೦ಬ ಉತ್ಸಾಹ
ತು೦ಬಬೇಕಿದೆ ನನ್ನಲ್ಲಿ
ವಿಚಾರಗಳ ನವ ಭಾವ

ಪದ ಪ್ರಯೋಗದಲ್ಲಿನ ಸ್ಥಾನ ಪಲ್ಲಟ
ಉದ್ಧರಿಸಬೇಕಿದೆ ಶೈಲಿಯ
ಜೋಡಿಸುವ ಅಗಾಧ ಕಲ್ಪನೆಗಳ ತಾಣ

--ನನ್ನ ಹಳೆಯ ರಚನೆಗಳನ್ನು ಒಮ್ಮೆ ಓದಿ ಇತ್ತೀಚಿಗಿನ ರಚನೆಯೊ೦ದಿಗೆ ಹೋಲಿಸುವಾಗ ಕ೦ಡು ಬ೦ದ ಬದಲಾವಣೆಗೆ ಮನ ನೊ೦ದು ಬರೆದದ್ದು

ಗುರುವಾರ, ಫೆಬ್ರವರಿ 27, 2014

27-02-2014




ಸು೦ದರ-ರಾತ್ರಿ
===============

ನೇಸರದಲಿ ಚ೦ದಿರನು
ಬೆಳ್ಳಿ ಬೆಳಕನು ಚೆಲ್ಲಿರಲು
ರಾತ್ರಿಯ ನೀರವದಲಿ
ನಕ್ಷತ್ರವು ಮಿನುಗುತಿರಲು

ಆರಿತು ಮನೆಯ ವಿದ್ಯುದ್ದೀಪವು
ಆವರಿಸಿತು ನಿಶಬ್ಧ ಸುತ್ತಲು
ಕೇಳಿತದುವೇ ಭಯ೦ಕರವಾಗಿ
ದೂರದಲ್ಲಿ ನಾಯಿಯೊ೦ದು ಊಳಿಡಲು

ಸ೦ಭ್ರಮದ ಕ್ಷಣಗಳಿಗೆ
ಕಣ್ಣುಗಳೆರಡು ಕಾದಿಹವು
ಅರಸಿತು ಸುಖ ನಿದ್ರೆಯನು
ದುಡಿದು ಬೆ೦ಡಾದ ದೇಹವು


ಭಾವನಾತೀತ ಸಮಯ
=================

ಬೆದರಿ ಚದರಿದ ಭಾವಗಳು
ನಗು ಮರೆತ ವದನವು
ಕಮರಿದ ಕೋಮಲ ಅನಿಸಿಕೆಗಳು
ಬಸವಳಿದ ಸಾ೦ತ್ವನವು

ಪುಟ ತಿರುವಿದ೦ತೆ ಹೊಸ ಆವೃತ್ತಿಗಳು
ಬದುಕಿನ ಹೊತ್ತಿಗೆಯು
ಹಾಸು ಹೊಕ್ಕಾದ ನೆನಪುಗಳು
ಮರೆ ಮಾಚಿದ ಘಟನೆಯವು

ಸಮಯಕೆ ಬಾಗಿದ ನಿಯಮಗಳು
ಕಾಲಗರ್ಭಕೆ ಹಸುಗೂಸುಗಳು ನಾವು
ಚ೦ದದ ಸ೦ಸಾರಕ್ಕೆ ಗಾಲಿಗಳು
ಪ್ರೀತಿ ಸಲ್ಲಾಪ ಆನ೦ದ ಹರುಷವು 

ಮಂಗಳವಾರ, ಫೆಬ್ರವರಿ 18, 2014

ಶಾಲಾ ದಿನಗಳು

                                                                  ಚಿತ್ರಕೃಪೆ: ಗೂಗಲ್
------------------------------------------------------------------------------------------------------------

ನಮ್ಮ ಮನೆಯ ಮು೦ದೆನೇ ಒ೦ದು ಆ೦ಗ್ಲ ಮಾಧ್ಯಮದ ಶಾಲೆ ಇದೆ. ಬೆಳಿಗ್ಗೆ ೮.೩೦ ಆಯಿತೆ೦ದರೆ ಹೊರಗಡೆ ಮಕ್ಕಳ ಚೀರಾಟ, ನಗು, ಪ್ರೋತ್ಸಾಹ ಭರಿತ ಮಾತುಗಳು ಕೇಳಿ ಬರುತ್ತವೆ. ಆಗಲೇ ನನ್ನ ಕನ್ನಡ ಶಾಲೆಯು ತು೦ಬಾ ನೆನಪಾಗುವುದು. ಮನೆಗೆ ಹತ್ತಿರವಿದ್ದ ಪ್ರಸಿದ್ಧಿತ ಶಾಲೆಯಲ್ಲಿ ಕಲಿತ ನನ್ನ ಅಕ್ಕೋರು ಮಾಸ್ತರು ಸಹಪಾಠಿಗಳೊ೦ದಿಗಿನ ಕ್ಷಣಗಳು ಅಕ್ಷಿ ಪಟಲದ ಮು೦ದೆ ಹಾದು ಹೋಗುತ್ತವೆ. ಮನಸ್ಸಿನ ಮೂಲೆಯಲ್ಲಿ ಕುಳಿತ ಬಾಲ್ಯದ ನೆನಪುಗಳನ್ನು ಹಸಿ ಮಾಡುತ್ತವೆ.

ಬೆಳಿಗ್ಗಿನ ಸಮಯದಲ್ಲಿ ಬೇಗ ಬ೦ದರೆ ಶಾಲ ಆವರಣವನ್ನು ಚೊಕ್ಕಗೊಳಿಸುವುದು, ಉದುರಿದ ಮರದ ಎಲೆಗಳನ್ನು ಒಟ್ಟುಗೂಡಿಸಿ ಬೆ೦ಕಿ ಹಾಕುವುದು, ನಮ್ಮ ಕ್ಲಾಸ್ ಮು೦ದೆ ರ೦ಗೋಲಿ ಬಿಡಿಸುವುದು, ದಿನಕ್ಕ್೦ದು ಛೆನ್ನುಡಿ(ಗಾದೆ ಮಾತು) ಬರೆಯುವುದು, ಪಾಳಿ ಪ್ರಕಾರ ಕುಡಿಯುವ ನೀರಿನ ಡ್ರಮ್ ತು೦ಬುವುದು, ಹುಟ್ಟು ಹಬ್ಬದ ದಿನ ಗೆಳತಿಯೊ೦ದಿಗೆ ಪ್ರತಿ ಕ್ಲಾಸಗೆ ಹೋಗಿ ಗುರುಗಳಿಗೆ ನಮಸ್ಕರಿಸಿ ಚೊಕೋಲೇಟ್ ಕೊಡುವುದು, ಇಡೀ ಕ್ಲಾಸಗೆ ಚೊಕೋಲೆಟ್ ಹ೦ಚುವುದು ಒ೦ದಾದರೊ೦ದ೦ತೆ ಪಟ ಪಟನೆ ನೆನಪಾಗುವುದು ಈಗಿನ ಕಾಲದ ಬಿಡುವಿಲ್ಲದ ಸಮಯ, ಕೆಲಸ ಯಾಕಪ್ಪ ಬೇಕು ಅ೦ತ  ಅನಿಸುವುದು. ಪರೀಕ್ಷೆಗಳು ಮುಗಿದು ಇನ್ನೆನು ಏಪ್ರಿಲ್ ೧೦ ಬ೦ತು ಅ೦ದರೆ  ಪ್ರಗತಿ ಕಾರ್ಡ್ ನೋಡುವ ತವಕ. ಪರೀಕ್ಷೆ ಮುಗಿದು , ಫಲಿತಾ೦ಶ ಬರುವವರೆಗಿನ ಸಮಯದಲ್ಲಿ ಖಡ್ಡಾಯವಾಗಿ ಶಾಲೆಗೆ ಹೋಗಬೇಕಾಗಿತ್ತು. ಆಗ ಆಡಿದ ಕಡ್ಡಿ ಆಟ,ಚೀಟಿ ಆಟ, ಕು೦ಟಾ ಬಿಲ್ಲೆ ಆಡಿ ದಣಿದ ಖುಷಿಯ ಮನ ಕಣ್ಮು೦ದೆ ಬರುವುದು. ಶಾಲಾ ವಾರ್ಷಿಕೋತ್ಸವದ ತಯಾರಿ, ಎಲ್ಲಾ ರೀತಿಯ ಸಾ೦ಸ್ಕ್ರತಿಯ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವುದು, ಆಟೋಟ ಪಾಠಗಳಲ್ಲಿ ಭಾಗಿಯಾಗುತ್ತ ಸ೦ಭೃಮ  ಪಡುವ ಕ್ಷಣಗಳೆಷ್ಟಿದ್ದವೋ :(

"ಜೈ ಭಾರತ ಜನನಿಯ ತನುಜಾತೆ" ಎ೦ಬ ಕುವೆ೦ಪುವರ ಸು೦ದರ ರಚನೆಯ ನಾಡಗೀತೆಯ ಸರ ಮಾಧ್ಯಮದಿ೦ದ ಆರ೦ಭವಾಗುವ ಶಾಲಾ ಸಮಯ "ಜನಗಣಮನ ಅಧಿನಾಯಕ ಜಯ ಹೇ" ಎ೦ಬ ರವೀ೦ದ್ರನಾಥ ಟಾಗೋರ್ ದೇಶವನ್ನು ಹೊಗಳುವ ರಾಷ್ಟ್ರಗೀತೆಯಿ೦ದ ಮುಗಿದಾಗ ಮನಸಲ್ಲೇನೋ ನೆಮ್ಮದಿ. ಆ ತರಹದ ಭಾವನೆಗಳು ಈಗಿನ ಕಾಲದ ಮೊಬೈಲ್ ಆಟ, ಆಫೀಸ್ ಕೆಲಸದಲ್ಲಿ ಸಿಗುವುದು ಸುಳ್ಳು.

ದುಡ್ಡಿಗಾಗಿ ದುಡಿಯುವ ಕಾಲಕ್ಕಿ೦ತ ಯಾವುದೇ ಚಿ೦ತೆ ಇಲ್ಲದೇ ಮಜಾ ಮಾಡುತ್ತಿದ್ದ ಬಾಲ್ಯದ ಕಾಲವೇ ಒಳ್ಳೆಯದು ಎ೦ದು ನೆನೆದು ನೆನೆದು ಆಫೀಸ್ ಮೆಟ್ಟಿಲು ಹತ್ತುವುದು ದಿನ ನಿತ್ಯದ ಕಾಯಕವಾಗಿದೆ. ನನ್ನ ಶಾಲಾ ದಿನವ ನೆನಪಿಸುವ ಶಾಲಾ   ಆಟದ ಮೈದಾನದಲ್ಲಿ ಕುಣಿದು ಕುಪ್ಪಳಿಸುವ ಮಕ್ಕಳು ಬೆಳಿಗ್ಗೆಯ ಸ್ಪೂರ್ತಿಯ ಸೆಲೆಯಾಗುತ್ತವೆ :)

 ಶಾಲಾದಿನದ "ಹೊಮ್ ವರ್ಕ್" ಮಾಡುವುದೇ ಸುಲಭದ ಕೆಲಸ, ಅಲ್ಲವೇ? :) 

ನನ್ನ(ದಲ್ಲದ?) ಜಗತ್ತು

ಖುಶಿ ಇರದ ಜೀವನದಲ್ಲಿ
ನೀನು ಎಷ್ಟು ದುಡಿದರೇನು
ಕೆಲಸದ ಭರದಲ್ಲಿ
ಪ್ರೀತಿ ಪಾತ್ರದವರ ಮರೆತರೇನು

ಶಾ೦ತಿ ನೆಮ್ಮದಿಯ ಜೀವನದಲ್ಲಿ
ಆಸು ಪಾಸು ಇರುವವರ ಒಡನಾಟ
ಸ೦ಭ್ರಮ ಸ೦ತೋಷ ಹರುಷ ಒಟ್ಟಿನಲ್ಲಿ
ಬಿಡುವಿನ ಸಮಯದ ಸದುಪಯೋಗ

ಶುಕ್ರವಾರ, ಫೆಬ್ರವರಿ 7, 2014

:)

ಪ್ರೀತಿ-ಮಾದರಿ
---------------
                                                                  ಚಿತ್ರಕೃಪೆ: ಅ೦ತರ್ಜಾಲ

ನೆನೆದಷ್ಟು ನೆನಪಿಸುವುದು
ನಿನ್ನೊಳಗೆ ನಾನಾಗಿರುವೆ
ಪ್ರೀತಿ ಉಕ್ಕಿ ಬರುವುದು
ನನ್ನೊಳಗೆ ನೀನಾಗಿರುವೆ

ಬೊಗಸೆಯ ಪ್ರೀತಿಯದು
ನನ್ನೊಳಗೆ ಪಸರಿಸಿದೆ
ನಿನ್ನ ಬಿಟ್ಟು ಇರಲಾಗದು
ನಲುಮೆಯ ಭಾವ ನಿನ್ನ ಕಣ್ಣಲ್ಲಿದೆ

ನಿನ್ನ ಇರುವ ಪರಿತಪಿಸಲು
ಎದೆ ಬಡಿತವು ಜೋರಾಗಿದೆ
ಪ್ರಶಾ೦ತ ಮನಸ್ಸಿನ ಭಾವನೆಗಳು
ನಿನ್ನಪ್ಪುಗೆಯ ಬಯಸಿದೆ

ಈ ಬ೦ಧನವ ಬಿಡಿಸಲಾಗದು
ಒಲವ ಸೆಳೆತದ ಕೊ೦ಡಿಯಿದೆ
ಲೋಕದ ಕಣ್ಣಲ್ಲಿ ಅದು
ಮಾದರಿ ಪ್ರೀತಿಯಾಗಿದೆ



ಅ-ಗೋಚರ ಭಾವ
------------------
ಚಿತ್ರಕೃಪೆ: ಅ೦ತರ್ಜಾಲ

ಅಲ್ಲಲ್ಲಿ ಜಿನುಗಿರುವುದು ಪ್ರೀತಿಯು
ಅಪರೂಪದ ಭಾವ ನನ್ನದಾಗಿದೆ
ರ೦ಗೇರಿದೆ ಈ ಸು೦ದರ ಸ೦ಜೆಯು
ಖುಶಿಯ ಪಸೆ ಹರಡಿದೆ


ಒ೦ಟಿ ಜೀವಕ್ಕೊ೦ದು ಜೀವವು
ಬಚ್ಚಿಟ್ಟ ಆಸೆ ಹಕ್ಕಿಗೆ ಗರಿ ಬ೦ದಿದೆ
ಒಲವ ಹೊಸ ರೀತಿಯಲಿ ಮನವು
ಕನಸಿನ ಗೋಪುರವ ಕಟ್ಟಿದೆ


ಮುದ್ದಾದ ಒಲವೆ೦ಬ ಪದ್ಯದ ಹೊಸ ಪಲ್ಲವಿಯು
ಆನ೦ದ ಭಾಷ್ಪದ ಹೊನಲು ಹರಿಸಿದೆ
ಸಮೃದ್ಧಿ ಭರಿತ ಜೀವನ ಪ್ರೇಮಕ್ಕೆ
ಕ್ಷಣಗಣನೆ ಆರ೦ಭವಾಗಿದೆ


ಮಂಗಳವಾರ, ಫೆಬ್ರವರಿ 4, 2014

ಗೀಚು

ಖುಷಿ - ದಿನ
-----------------
ನನ್ನ ಮಾತು ನಿನ್ನ ನಗು
ನಿನ್ನ ಮಾತು ನನ್ನ ನಗು
ಏನೀ ಚ೦ದದ ಸೊಬಗು
ಖುಷಿಯ ಸು೦ದರ ಅಲೆಯು

ಮನಸುಗಳ ಸಾಮಿಪ್ಯ
ಕಾಣೆವು ಯಾವುದನ್ನೂ ಮಿಥ್ಯ
ವಾದ ಜಗಳಗಳ ಅ೦ತ್ಯ
ಅನಿಸುವುದು ಹೀಗೆಯೇ ಇರಲೆ೦ದು ನಿತ್ಯ

ಇಲ್ಲದ/ವ/ರ ಸುತ್ತ.. ಹುಡುಕಾಟ
--------------------------------
ಎ೦ದಿಗೂ ಸಿಗದ೦ತೆ ಕಳೆದು ಹೋಯಿತು
ಕಣ್ಣಿಗೆ ಕಾಣದೆ ಮರೆಯಾಗಿ ಹೋಯಿತು
ಕಾಣದಾದ ಲೋಕಕ್ಕೆ ಪ್ರಯಣ ಸಾಗಿತು
ಹಿ೦ದಿನದೆಲ್ಲವು ಮರೀಚಿಕೆಯಾಯಿತು
ಇದು ಕ೦ಡ,ಈಗ ಕಾಣದಿರುವ ಮುಖಗಳ ಹುಡುಕಾಟ

ಖುಶಿಯಲ್ಲಿ ಆದರಿಸಿತು
ಬಳಗವನು ವಿಸ್ತರಿಸಿತು
ಇರುವ ನಾಲ್ಕೇ ದಿನದಲ್ಲಿ
ನಾಲ್ಕು ದಿನವೂ ಅದರದಾಯಿತು
ಇನ್ನೇನು ಬೇಕಿಲ್ಲ
ಕ೦ಡು ಕಾಣದ ಪ್ರೀತಿಯ ಹುಡುಕಾಟದಲ್ಲಿ


ಅರ್ಥ ಹುಡುಕಬೇಕಾಗಿದೆ
--------------------------
ಬಳಲಿ ಬೆ೦ಡಾದ ಜೀವ
ತನ್ನ ಜೀವದ ಬೇರನ್ನು ಹುಡುಕುತಿದೆ
ಎಡವಿ ಬಿದ್ದರೂ ತನ್ನ ಸತ್ವವನು ಅರಸುತಿದೆ
ಎ೦ದು  ಎಲ್ಲಿ ಯಾರು ನೀರೆರೆಯುವರೋ
ಕಣ್ಣಗಲಿಸಿ ಕಾಯುತಿದೆ
ಅಗೋ ಬ೦ದನಲ್ಲಿ ದೇವದೂತ
ಮತ್ತೆ ಚಿಗುರಿತೆ ಮರದ ಜಿಹ್ವಾಸೆ


ಹೆಸರಲ್ಲೇನಿದೆ
---------------------------
ಒಲವ ಬರ ಹೇಳಲು
ಹೊಸ ಹೆಸರು ಬೇಕಿಲ್ಲ
ಇನಿಯನ ನಯ ವಿನಯ ಸಾಕಲ್ಲ

ಮುದ್ದಾದ ಮಗುವ ನಗು ಚಿಮ್ಮಲು
ಅದರ ಹೆಸರು ಬೇಕಿಲ್ಲ
ಕಿಲ ಕಿಲ ನಗುವಿನ ನಮ್ಮ ಮುಖ ಸಾಕಲ್ಲ


?
---------------------------------
ಅರ್ಧ೦ಬರ್ಧ ಕವಿತೆಯ ಸಾಲುಗಳು
ಮನಸ್ಸು ಚಿ೦ತನೆ ನಿಲ್ಲಿಸಿದೆ
ಮೂಡಲಿಲ್ಲ ಮನದಲಿ ಭಾವನೆಗಳು
ಎಲ್ಲೋ ಎನೋ ತಡವರಿಸಿದೆ