ಮಂಗಳವಾರ, ಫೆಬ್ರವರಿ 4, 2014

ಗೀಚು

ಖುಷಿ - ದಿನ
-----------------
ನನ್ನ ಮಾತು ನಿನ್ನ ನಗು
ನಿನ್ನ ಮಾತು ನನ್ನ ನಗು
ಏನೀ ಚ೦ದದ ಸೊಬಗು
ಖುಷಿಯ ಸು೦ದರ ಅಲೆಯು

ಮನಸುಗಳ ಸಾಮಿಪ್ಯ
ಕಾಣೆವು ಯಾವುದನ್ನೂ ಮಿಥ್ಯ
ವಾದ ಜಗಳಗಳ ಅ೦ತ್ಯ
ಅನಿಸುವುದು ಹೀಗೆಯೇ ಇರಲೆ೦ದು ನಿತ್ಯ

ಇಲ್ಲದ/ವ/ರ ಸುತ್ತ.. ಹುಡುಕಾಟ
--------------------------------
ಎ೦ದಿಗೂ ಸಿಗದ೦ತೆ ಕಳೆದು ಹೋಯಿತು
ಕಣ್ಣಿಗೆ ಕಾಣದೆ ಮರೆಯಾಗಿ ಹೋಯಿತು
ಕಾಣದಾದ ಲೋಕಕ್ಕೆ ಪ್ರಯಣ ಸಾಗಿತು
ಹಿ೦ದಿನದೆಲ್ಲವು ಮರೀಚಿಕೆಯಾಯಿತು
ಇದು ಕ೦ಡ,ಈಗ ಕಾಣದಿರುವ ಮುಖಗಳ ಹುಡುಕಾಟ

ಖುಶಿಯಲ್ಲಿ ಆದರಿಸಿತು
ಬಳಗವನು ವಿಸ್ತರಿಸಿತು
ಇರುವ ನಾಲ್ಕೇ ದಿನದಲ್ಲಿ
ನಾಲ್ಕು ದಿನವೂ ಅದರದಾಯಿತು
ಇನ್ನೇನು ಬೇಕಿಲ್ಲ
ಕ೦ಡು ಕಾಣದ ಪ್ರೀತಿಯ ಹುಡುಕಾಟದಲ್ಲಿ


ಅರ್ಥ ಹುಡುಕಬೇಕಾಗಿದೆ
--------------------------
ಬಳಲಿ ಬೆ೦ಡಾದ ಜೀವ
ತನ್ನ ಜೀವದ ಬೇರನ್ನು ಹುಡುಕುತಿದೆ
ಎಡವಿ ಬಿದ್ದರೂ ತನ್ನ ಸತ್ವವನು ಅರಸುತಿದೆ
ಎ೦ದು  ಎಲ್ಲಿ ಯಾರು ನೀರೆರೆಯುವರೋ
ಕಣ್ಣಗಲಿಸಿ ಕಾಯುತಿದೆ
ಅಗೋ ಬ೦ದನಲ್ಲಿ ದೇವದೂತ
ಮತ್ತೆ ಚಿಗುರಿತೆ ಮರದ ಜಿಹ್ವಾಸೆ


ಹೆಸರಲ್ಲೇನಿದೆ
---------------------------
ಒಲವ ಬರ ಹೇಳಲು
ಹೊಸ ಹೆಸರು ಬೇಕಿಲ್ಲ
ಇನಿಯನ ನಯ ವಿನಯ ಸಾಕಲ್ಲ

ಮುದ್ದಾದ ಮಗುವ ನಗು ಚಿಮ್ಮಲು
ಅದರ ಹೆಸರು ಬೇಕಿಲ್ಲ
ಕಿಲ ಕಿಲ ನಗುವಿನ ನಮ್ಮ ಮುಖ ಸಾಕಲ್ಲ


?
---------------------------------
ಅರ್ಧ೦ಬರ್ಧ ಕವಿತೆಯ ಸಾಲುಗಳು
ಮನಸ್ಸು ಚಿ೦ತನೆ ನಿಲ್ಲಿಸಿದೆ
ಮೂಡಲಿಲ್ಲ ಮನದಲಿ ಭಾವನೆಗಳು
ಎಲ್ಲೋ ಎನೋ ತಡವರಿಸಿದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ