ಬುಧವಾರ, ಜೂನ್ 28, 2017

ನನ್ನವನು


ನಿನ್ನೊಂದು ಮಧುರ ಮಾತು ಸಾಕು
ನನ್ನಲ್ಲಿ ಹುಟ್ಟುವುದು ಚೈತನ್ಯ
ಮೃದು ವಚನ ನೀಡಿದರೆ ಸಾಕು...
ನನ್ನಲ್ಲಿ ಸಾಯುವುದು ವೈರಾಗ್ಯ


ಸಂಜೆ ತಂದ ಸಣ್ಣ ಸಿಹಿ ಪೊಟ್ಟಣ ಸಾಕು
ಇಂಗಿಸೀತು ತಲೆನೋವು ತಂದ ಹಸಿವ
ವಿಹಾರದಲ್ಲಿ ನೀಡಿದ ಭರವಸೆಯ ಮಾತು
ಒರೆಸೀತು ಧರಧರನೆ ಇಳಿದ ಕಣ್ಣೀರ

ನೀ ಹೇಳಿದ ನುಡಿ "ನನಗೆ ನೀನಲ್ಲದೆ ಬೇರಾರು"
ಕಂಡ ಕನಸೆಲ್ಲವ ಬಾಚಿ ತಬ್ಬಿತು
ಕಣ್ಣಲ್ಲೇ ಮಾತಾಡಿದರೆ ಸಾಕು
ಉಳಿದ ಪ್ರಶ್ನೆಗೆ ಉತ್ತರ ಸಿಕ್ಕಿತು

ಜೀವನದ ಹಾದಿಯಲಿ
ಭೇಟಿಯಾಗಲೇ ಬೇಕು ಮುನಿಸು ಮುರಿಸು
ಪಟಕ್ಕನೆ ಕೊಡಲೇ ಬೇಕು ತುಟಿಯ ಒತ್ತೊಚ್ಚು
ಬಾಳ ಹೊಲಿಗೆಗೆ ನಾನು ದಾರ ಅವನು ಸೂಜಿ
ಸುಂದರ ವಸ್ತ್ರದ ವಿನ್ಯಾಸ

ನನ್ನೆಲ್ಲ ಆಸೆಗೆ ರೂವಾರಿ
ಅವನು ಹೆಣೆದ ಕನಸಿಗೆ ನಾನಾದೆ ಮುನ್ನುಡಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ