ಬುಧವಾರ, ಜೂನ್ 28, 2017

ಅಮ್ಮ - ನಾನು


ಮುಂದಿಹುದು ಮಜಲುಗಳು ಹಲವಾರು
ದಾರಿಯ ತೋರುತಿಹಳು ಕೈ ಹಿಡಿದು
ಹೆಜ್ಜೆ ಹೆಜ್ಜೆಗೂ ನನ್ನ ಮೇಲಿನ ಪ್ರೀತಿ...
ಎತ್ತರೆತ್ತರಕೆ ಸಾಗುತಿದೆ ಸಲಲಿತವಾಗಿ


ಹಸಿರು ತುಂಬಿದ ವನಸಿರಿ ಮಧ್ಯೆ
ನಮ್ಮ ಪ್ರಯಾಣ ಸಾಗಿದೆ
ದಾರಿ ಸುಲಭ ಸಾಧ್ಯವೆನಿಸಿದೆ
ಕಾಣಸಿಗದ ಮುಖ ಖುಷಿಯಲಿ ನಲಿದಿದೆ

ಪ್ರೀತಿ ಪ್ರೇಮ ಕಾಳಜಿ ಅಮ್ಮನ
ಒಡಲ ಜೋಳಿಗೆಯಲಿ ತುಂಬಿದೆ
ಮೆಟ್ಟಿಲು ಹತ್ತಲು ಕೈ ಹಿಡಿದ ಅಮ್ಮನ
ಜೋಳಿಗೆಯೇ ಆಯಾಸ ಮರೆಸುತಿದೆ

ದೇಗುಳದ ಬಾಗಿಲು ಸನಿಹವೆನಿಸಿದೆ
ಕರ ಹಿಡಿದ ತಾಯಿಯ ಜೊತೆ
ಬೇರೆಲ್ಲವು ನಗಣ್ಯವೆನಿಸುತಿದೆ
ಅಮ್ಮ ಮತ್ತು ನಾನು ಮೆಟ್ಟಿಲು ಹತ್ತುತಿರಲು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ