ಬುಧವಾರ, ಜೂನ್ 28, 2017

ಕಂದ



ಕಂದ ನಿನ್ನ ನಗು
ನನ್ನ ಕನಸ ನನಸಾಗಿಸಿದೆ
ಮುಖಕೆ ತಾಕಿದ ಮುದ್ದು ಮುತ್ತು...
ಬದುಕ ನಶೆಯೇರಿಸಿದೆ


ಪುಟ್ಟ ಕಂದ ನನ್ನ ಸ್ವಂತ
ಅಮ್ಮ ಎಂದು ಕರೆದಿದೆ
ತುಂಟ ನೆಗೆತ ಮೈ ಪುಳಕ
ಈ ಜೀವಕ್ಕೊಂದು ಹೆಸರಿಟ್ಟಿದೆ

ಇರುಸು ಮುರುಸು ತನ್ನದೇ ವಾದ
ಸ್ಪಷ್ಟ ವಿವರಣೆ ನೀಡಿದೆ
ಬೆಳೆದು ನಿಂತು ಬೇರು ಹಿಡಿತ
ಅಚಲ ಸುಫಲವಾಗಲಿದೆ

ಮುದ್ದು ಕಂದನಾಗೇ ಎಂದೂ
ನೀನು ನನ್ನ ರಮಿಸುತಿರು
ಬಿಳಿಯ ಕಾಗದದಂತೆ ನಿನ್ನ ಮನ
ಜೀವನದ ರಂಗು ತುಂಬುತಿರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ