ಬುಧವಾರ, ಜೂನ್ 28, 2017

:😍:♡:😍:

ಬಿಡದೆ ಸವೆಸುವ ಜೀವಕ್ಕೊಂದು ನೆಪ
ಸಂಜೆ ಸೂರ್ಯ ನೆನಪಿಸುವ ಘಳಿಗೆ
ಕಾಯುತ್ತ ಕುಳಿತಂತಿದೆ ಬಿಚ್ಚಿಡಲು...
ನೆನಪುಗಳ ಸುರುಳಿ


ಅವನಲ್ಲಿ ಇವಳಿಲ್ಲಿ
ಕಳೆದ ಸಮಯ ಸರಸವೊಂದೆ
ಸುಂದರ ಬದುಕ ಹೆಣೆಯಲು ಸಾಕು
ಇವಳಲ್ಲಿ ಅವನಲ್ಲಿ
ನೀಡಿದ ಭರವಸೆಯ ಆಲಿಂಗನವೊಂದೆ
ಚಂದದ ನಗು ಮುಖ ತುಂಬಲು ಸಾಕು

ನಡು ರಾತ್ರಿಯ ಪ್ರೀತಿಭರಿತ ಸಂದೇಶ
ನೋಡಲೇ ಬೇಕೆಂಬ ಹಂಬಲ ಹುಟ್ಟು ಹಾಕಿತು
ಪಿಸುಗುಟ್ಟಿ ಚೆಲ್ಲಿದ ನಗು
ಕಾತುರತೆಗೆ ಸವಾಲೆಸೆಯಿತು

ಜಗಳ ಬೇಸರಗಳೇನೇ ಇರಲಿ
ಸುಂದರ ಭಾವನೆಗಳ ಮಿಲನ ಬಯಸಿತು
ಕನಸು ಸಾಕಾರಗೊಳಿಸಬೇಕೆಂಬ ಆಸೆ
ತುಂತುರು ಮಳೆ ಹನಿಯಂತೆ ಮನ ತಟ್ಟಿತು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ