ಬುಧವಾರ, ಜೂನ್ 28, 2017

ಸವಿ ನೆನಪುಗಳು - ೨


ನಂದು ನಿಂದು ಮೊದಲ ಮುಖತಃ ಭೇಟಿ
ನಾಚಿಕೆಯ ಮುದ್ದೆ ನಾನು
ಎದೆ ಬಡಿತ ಲೆಕ್ಕಕ್ಕಿಲ್ಲ ಕೋಟಿ...
ಸ್ಪುರದ್ರೂಪ ಹುಡುಗ ನೀನು


ತಡವರಿಸಿದ ಮಾತು
ಎಲ್ಲವನು ಹಸ್ತಾಂತರಿಸಿದ್ದ
ಜಂಗಮವಾಣಿಯ ಸಂದೇಶಗಳು
ನಿನ್ನವಳಾಗಿದ್ದೆ ಆಗಲೇ ಸೋತು
 ಎಲ್ಲವನ್ನು ವೃತ್ತಾಂತರಗೊಳಿಸಿದ್ದ
ನಲುಮೆಯ ಮೆಲು ನುಡಿಗಳು

ಬರಿದಾಗದ ಮಾತಿನ ಕಂತೆ
ಸಮಯದ ಪರಿವೇ ಇಲ್ಲ
ಕನಸ ಹೆಣೆಯೋದೊಂದೇ
ಮಂದಹಾಸಕ್ಕೆ ಕೊರತೆ ಇಲ್ಲ

ದಿನವೂ ಹೊಸ ಪುಸ್ತಕದ ಹಾಳೆ
ಪದಪುಂಜಗಳ ಬಿತ್ತಳಿಕೆ
ಖುಷಿಯಾಗಿರುವ ಕಾರಣ ನೀನೇ
ಮುದ್ದುಗರೆಯುವ ಕಲಿಕೆ

ವರುಷಗಳುರುಳಿವೆ
ಸಂತಸದ ಕ್ಷಣಗಳು ಇನ್ನೂ ಇವೆ ಹಸಿಯಾಗಿ
ಕಡಿಮೆಯಾಗದಿರಲಿ ಪ್ರೀತಿಯ ಸಿಂಚನ
ಸಿಗಬಾರದೇ ಒಮ್ಮೆ ಮೊದಲ ಭೇಟಿಯಾಗಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ