ಬುಧವಾರ, ಜೂನ್ 28, 2017

ಹೆಸರಿಡದ ಪ್ರೀತಿ


ಕಾಡಿರದ ಪ್ರೀತಿಯಲಿ
ನನ್ನಿನಿಯನ ಹುಡುಕಾಟ
ಒಲವಿರದ ಪದಗಳಲಿ
ರಸಿಕತೆಯ ಒದ್ದಾಟ
*******
ಬಲವಂತದಲಿ ಹುಟ್ಟದು ಪ್ರೀತಿ
ಮರುಭೂಮಿಯ ಓಯಸಿಸ್
ಹುಡುಕುತ ಸಂಯಮದಿ
ಧಾರೆ ಎರೆದು ಹಿಡಿದಿಟ್ಟ ರೀತಿ
*******
ವ್ಯಾಖ್ಯಾನ ಕೊಟ್ಟಿಲ್ಲ
ಕಾರಣವು ಗೊತ್ತಿಲ್ಲ
ಅವರಿಬ್ಬರು ಕಂಡ
ಪ್ರೇಮಾಂಕುರವೇ ಚಂದ
********
ದೋಷಗಳು ಹೊಸತಲ್ಲ
ಜಗಳಕ್ಕೆ ಪೂರಕವಲ್ಲ
ರೂಪುಗೊಳ್ಳುತಿದೆ ಬದುಕು
ಹೊಸತನದಿ
ಕೇಳುತಿದೆ ನೋಡುತಿದೆ ಅವರಿಬ್ಬರನು
ಶರಧಿ
*********
ಕೋಪದಲಿ ಬೈದಿಹನು
ವಾದ ಮುಂದುವರೆದಿಹುದು
ಆಮೇಲೆ ಸಂತೈಸಿ
ಬೇಸರವ ಮರೆಸಿಹನು
ನವಿರಾದ ಹಿತ ಭಾವ ಮನ ತುಂಬಿ
ಹೊಸ ರಾಗ ರಚಿಸಿಹನು
**********
ಅವನಲ್ಲಿನ ನೂನ್ಯತೆ
ಅವಳಲ್ಲಿನ ತುಂಟಾಟ
ಇಬ್ಬರ ಮಧ್ಯದಲಿ ಕೊಂಡಿಯಾಗಿದೆ
ಹೊಸ ಜಗವ ಹೊಸ ರೀತಿಯಲಿ
ನೋಡುತ ಮೈಮರೆತು
ಖುಷಿಯನ್ನು ಪಸರಿಸಿ
ಹಿತ ನೀಡಿದಂತಿದೆ
ಹೆಸರಿಡದ ಪ್ರೀತಿ
************

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ