ಬುಧವಾರ, ಜೂನ್ 28, 2017

ಭರವಸೆ


ಮದುವೆಯೆಂಬ ಮಜಲು ನಮ್ಮಿಬ್ಬರ
ಕೈ ಜೋಡಿಸಿದೆ
ಪರಸ್ಪರ ಭಾವನೆಗಳ ವರ್ಗಾವಣೆಗೆ...
ನಾಂದಿಯಾಗಿದೆ


ಅರಿತು ಬಾಳುವ ಸಂಗತಿ
ನನ್ನ ನಿನ್ನ ಒಂದುಗೂಡಿಸಿದೆ
ಪ್ರೀತಿ ಪ್ರೇಮದ ಪರಿಚಯ
ನಡುವಿನ ಅಂತರಕೆ ಪೂರ್ಣ ವಿರಾಮ ಇಟ್ಟಿದೆ

ಸ್ವೀಕರಿಸಿದೆ ನೀನು ನನ್ನನು ಬಾಳ ಸಂಗಾತಿಯಾಗಿ
ಕರವ ಹಿಡಿವೆನು ಕಷ್ಟ ಸುಖಗಳ ನರ್ತನಕೆ
ರೋಸಿ ಹೋಗುತಿರಲು ನೀನು
ಗ್ಲೂಕೋಸು ನೀರು ನಾನು

ದಾರಿ ಸವೆದಿದೆ ನಿನ್ನ ಜೊತೆ
ಇನ್ನು ದೂರ ಬಾಕಿ ಇದೆ
ನನಗೆ ನೀನು ನಿನಗೆ ನಾನು ಎಂಬ ಮಂತ್ರ
ಸುಖೀ ಜೀವನದ ಯಶಸ್ವಿ ತಂತ್ರ

ಸುಂದರ ಸಂಜೆ ಮತ್ತೆ ತಂದಿರಿಸಿದೆ
ಸುಮಧುರ ಭಾವನೆಗಳ ಚಿತ್ತಾರ
ಆಹ್ಲಾದಕರವಾಗಿದೆ
ನಿನ್ನ ಸಂತೈಸುವ ಪರಿ ಭರವಸೆಯ ನುಡಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ