ಬುಧವಾರ, ಜೂನ್ 28, 2017

ಮರವಾಗಿ ನಾನು


ಬಿದ್ದೊರಗಿದ ಬೃಹದಾಕಾರದ ಮರ
ಆತ್ಮಹತ್ಯೆಯೇ? ಹತ್ಯೆಯೇ?
ಏನೂ ತಿಳಿಯದ ಮೂಕವೇದನೆ...
ಹಸಿರು ಎಲೆಗಳು ಮಣ್ಣಲ್ಲಿ ವಿಲೀನ


ಬರಲಿವೆಯಂತೆ ಗಗನಚುಂಬಿ ಕಟ್ಟಡಗಳು
ಮನುಷ್ಯರೆಲ್ಲ ಸೇರಿ ಮೋಜು ಮಾಡುವರಂತೆ
ಒಣ ಹವೆ ಕಲ್ಮಷ ಹೊಗೆ
ದಿನ ನೂಕಲೇಬೇಕು ವ್ಯಥೆ

ನಿನ್ನ ಉಸಿರು ನನ್ನ ನಿಟ್ಟುಸಿರು
ಬಿಸಿಲಿಗೆ ನೆರಳೇ ಆಸರೆ
ಕದ್ದು ಆಲಿಸುವೆ ಪ್ರೇಮಿಗಳ ಭಾಷೆ
ಕೆತ್ತಿರುವರು ನನ್ನ ಕವಚ ಸಾಕ್ಷಿಯಂತೆ

ಅಳಲು ಕೂಗು ಆರ್ತನಾದ
ಕಿವುಡನಾದನೆ ಮನುಜ
ಉಳಿಸಿರಿ ಬೆಳೆಸಿರಿ ಬೆಳೆಯಿರಿ
ಪ್ರತಿಧ್ವನಿಸಬೇಕು ನಿತ್ಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ