ಗುರುವಾರ, ಜೂನ್ 29, 2017

FB posts-more

ಅಕ್ಕರೆ

ಅಕ್ಕರೆಯ ಬಯಲದು
ಅಮ್ಮನ ತೊಡೆಯದುವು
ಕಿಂಚಿತ್ತು ಭಯವಿರದು...
ಅವಳೊಡನೆ ನಾನಿರಲು



ಮನ

ಒಡಲೊಳಗೆ ತುರುಕಿರುವೆ ನನ್ನೊಳ ಭಾವನೆಯ
ಇಂದೇಕೊ ಪರಿಪರಿಯ ಯಾತನೆಗೆ
ನನ್ನ ಬಳಿ ಕರೆದಿರುವೆ...
ಹಿಸುಕಿರುವೆ ಅದುಮಿರುವೆ ನನ್ನದೆಯ ಆಸೆಯ
ಭಾವನೆಯ ಗೋರ್ಗರೆತಕೆ ಕಣ್ಣೀರ ತಂಪೆರೆದಿರುವೆ



ಉತ್ಸಾಹ

ದಿನ ಕಳೆದ೦ತೆ ಬರವಣಿಗೆಯಲ್ಲಿ ವ್ಯತ್ಯಾಸ
ಕಾಣ ಸಿಗದು ಇ೦ದಿನದಲಿ
ಹಳೆ ರಚನೆಯಲ್ಲಿನ ರಸ ಭಾವ
ಕರಗಲಿಲ್ಲ ಬರೆಯಬೇಕೆ೦ಬ ಉತ್ಸಾಹ...
ತು೦ಬಬೇಕಿದೆ ನನ್ನಲ್ಲಿ
ವಿಚಾರಗಳ ನವ ಭಾವ

ಪದ ಪ್ರಯೋಗದಲ್ಲಿನ ಸ್ಥಾನ ಪಲ್ಲಟ
ಉದ್ಧರಿಸಬೇಕಿದೆ ಶೈಲಿಯ
ಜೋಡಿಸುವ ಅಗಾಧ ಕಲ್ಪನೆಗಳ ತಾಣ

 

ಬುಧವಾರ, ಜೂನ್ 28, 2017

ಹ್ರದಯ ವಿಶಾಲತೆ

ಜೀವನ ಸೀರಿಯಲ್ ಅಲ್ಲ
ಸೀರಿಯಲ್ಲೇ ಜೀವನವಲ್ಲ
...
ಹಗೆ ಹಲ್ಲೆ ಹೊಟ್ಟೆ ಉರಿ ಇಂದ ನೆಮ್ಮದಿಯ ಅಂತ್ಯ
ಪ್ರೀತಿ ಪ್ರೇಮ ಆಸರೆಯ ಕಾಳಜಿ ಇಂದ
ವ್ಯವಹರಿಸುವುದು ಮುಖ್ಯ
ತಿಲದಷ್ಟು ಹೋಲಿಕೆ ಮಾಡದಿರು
ಕಾಣುವುದೆಲ್ಲದರಲಿ ಸರಿ ತಪ್ಪು ಇರದು

ಸಾಲುಗಳು - ಅಪೂರ್ಣ


ಅವನಂತೆ ನಾನಿಲ್ಲ
ನನ್ನಂತೆ ಅವನಿಲ್ಲ
ಸ್ನೇಹ ಪ್ರೀತಿಗೆ ಕೊರತೆ ಇಲ್ಲ
...
ತಪ್ಪು ಸರಿಯ ತಿಕಲಾಟ
ನೆಮ್ಮದಿಗೆ ಹುಡುಕಾಟ
ಬಿಡು ನೀನು ಅವರವರ ಭಾವಕ್ಕೆ
ಅವರಂತೆ ನಾನಿಲ್ಲ
ನನ್ನಂತೆ ಅವರಲ್ಲ

ಆರ್ತನಾದ


ಕೂಗಿ ಹೇಳ ಬೇಕೆನಿಸಿದೆ
ಮನದಾಳದ ನೋವ
ಬರಲೊಪ್ಪುತ್ತಿಲ್ಲ ಕಣ್ಣೀರು
...
ಸಾಂತ್ವನಕೆ ಹಾತೊರೆಯುತಿದೆ
ಮರುಗುತ್ತಿರುವ ಪ್ರೀತಿ
ಸಿಗುತಿಲ್ಲ ಅಪ್ಪುಗೆಯ ಹಿಡಿತ
~~~~
ಸುಂದರ ನನಸಿಗಾಗಿ ಕಾಯುತಿವೆ
ಭಾವನೆಯ ಕಣ್ಣುಗಳು
ಭಾವಗಳ ಸಮ್ಮಿಲನಕೆ ಹರಿತಪಿಸಿವೆ
ಚಾಚಿದ ತೋಳುಗಳು
ಮನದಾರ್ತನಾದವ ಮರೆ ಮಾಚಿಸುತಿವೆ
ಮೊಗದ ನಗು

ಕನ್ನಡ

ಕನ್ನಡ ಎಂದೊಡೆ ಮೈ ನವಿರೇಳುವುದು
ಕವಿತೆ ಬರೆಯಲು ಹೊರಟರೆ ಪದಗಳು
ಒಂದೊಂದರಂತೆ ಜೋಡಣೆಗೊಳ್ಳುವವು

ಕನ್ನಡ ನುಡಿ ಚಂದ...
ಕನ್ನಡಿಗರ ಮನ ಚಂದ

ಕಲಿವ ಮೊದಲ ಭಾಷೆ ಕನ್ನಡವಾಗಲಿ
ಗೌರವಿಸುವ ಭಾವ ನಮ್ಮದಾಗಲಿ

FB post

ಕವಿತೆ ಬರೆಯುವುದು = ಖುಷಿ ತರುವುದು

ನನ್ನವರಾರಿಲ್ಲ
ಇರುವವರೆಲ್ಲ ನನ್ನವರಲ್ಲ
...
ಬಯಕೆಗಳಲ್ಲಲ್ಲಿ ಮನನೊಂದು ಕಣ್ಣೀರ ಸುರಿಸುತಿವೆ
ಬಿಗಿದಪ್ಪಿದ ಕೈಗಳೇ ನನ್ನ ತಿವಿಯುತಿವೆ
ಪ್ರೀತಿಯುಣಿಸಿದ ತುಟಿಗಳು ಬೈಗುಳವ
ಸುರಿಸುತಿವೆ
ಬರ ಸೆಳೆದ ಬಾಹುಗಳೇ ಉಸಿರುಗಟ್ಟಿಸುತಿವೆ
ನನ್ನವರಾರಿಲ್ಲ
ಇರುವವರೆಲ್ಲ ನನ್ನವರಲ್ಲ

FB posts

ಹೊಸತು
----------------------
ಮುದುಡಿದ ಭಾವದ ಎಸಳು
ಪ್ರೀತಿಯ ಸಿಂಚನಕೆ ಚೇತರಿಸುತಿದೆ
ಹೊಂಬಿಸಿಲ ಒಡನಾಟ ...
ಕಾಣದ ಸಂತಸವ ತರುತಿದೆ
ಮ(ರ)ನ ತುಂಬ ಹೊಸ ಚಿಗುರು
ಬಗೆ ಬಗೆಯ ಸಂಚಲನವು
ಹೂವೊಂದು ಪಕ್ವತೆಯ
ತಾಳುತಿದೆ



"ತ್ತ"
--------------------
ಆವರಿಸಿತು ಕತ್ತಲು
ಕಾಣದಾದೆನೇನು ಸುತ್ತ ಮುತ್ತಲು
ಸುಖ ನಿದ್ರೆ ಕನಸನ್ನು ಬಿತ್ತಲು
ತುಂಬಿತಲ್ಲಿಯೆ ಒಲವ ಸೆಲೆ ಬತ್ತಲು

ಸುಂದರವಲ್ಲವೇ!?


ಆಗ ತಾನೆ ಕಣ್ಣು ಕೂಡಿ
ಪ್ರೀತಿ ವಿನಿಮಯವಾಯಿತಷ್ಟೆ
ಅದರ ಭಾವ ಸವಿಯುವಷ್ಟು ಸುಂದರವಲ್ಲವೇ?
...
ಕನಸು ತುಂಬಿದ ನಯನಗಳು
ನಿದ್ದೆಯಲ್ಲಿ ನನಸುಗಾಣಲು
ಸವಿಯುವಷ್ಟೆ ಅದರ ಭಾವ
ಸುಂದರವೇ!

ಅವನ ರೂಪದಲ್ಲಿ ಬಂದ
ಪ್ರೀತಿಸಿದ ಕ್ಷಣಗಳು ಸ್ಪುರಿಸುವಂತ ಪ್ರೇಮ ಘಳಿಗೆ
ಗೋಚರಿಸಿದ ದೃಶ್ಯಗಳನುಭವದಷ್ಟೇ
ಸುಂದರವಲ್ಲವೇ?

ಹುಡುಗಿ ಮತ್ತು ಮಡಕೆಯ ಸಂವಾದ



ಕೈಯೆಲ್ಲ ಮೆತ್ತಿರುವೆ
ಕನಸೊಂದ ಹೊಸೆದಿರುವೆ...
ನಿನ್ನಲ್ಲೆ ನಾನಾಗಿ
ಹೊಸ ರೂಪ ಕೊಡುತಿರುವೆ


ನಿರ್ಜೀವ ನನ್ನ ಬಾಳು
ನೀರನ್ನೇ ಕುಡಿದಿರುವೆ
ಯಂತ್ರಕ್ಕೆ ಮನ ಮಿಡಿದು
ಮಡಕೆಯ ರೂಪ ತಾಳುತಿರುವೆ

ಆಕಾರ ಬಂದಾಯ್ತು
ಮೃದುವಾಗಿ ಹೊರತರುವೆ
ನಿನ್ನೊಳಗಿರಿಸುವದೆಲ್ಲವ ತಂಪಿರಿಸಲು
ಕಾಯಿಸಿ ಬಿಸಿ ಮುಟ್ಟಿಸುವೆ

ನನಗೊಂದು ಬಾಳ್ಕೊಡುವ
ಹುಡುಗಿಯೇ
ಹಸನಾಗಿರುವ ಬಾಳ್ವೆಯ
ನಾ ಕೊಡುವೆ

ಪಂಜರದ ಪಕ್ಷಿ

ಸ್ವತಂತ್ರತೆ ಕನಸಂತೆ ಭಾಸ
ಪಂಜರದಲ್ಲೇ ನನ್ನ ವಾಸ
ಕೊಟ್ಟಿದ್ದು ತಿನಬೇಕು ...
ಹಾರಾಟ ಮಿತಿಯಲ್ಲಿರಬೇಕು

ನಿನ್ನ ಹಾಗೆ ನಾನಲ್ಲ


ನನ್ನ ನೀನು ನಿನ್ನ ಹಾಗೆ
ಏಕೆ ಹೋಲಿಕೆ
ನಿನ್ನ ಹಾಗೆ ನೀನು ನನ್ನ...
ಮಾಡದಿರು ಹೋಲಿಕೆ


ಸ್ವಚ್ಛ ಮನಸು ಇಲ್ಲ ಹುಳುಕು
ಶುಭ್ರತೆಯೇ ಮನದ ಹೊಳಪು
ಸುತ್ತುವರೆದ ಕೊಚ್ಚೆ ನೀರು
ನಾತ ಹಬ್ಬಿಸಿದೆ ಗಬ್ಬು

ಜಾರಿ ಬಿದ್ದೆ ಚರ೦ಡಿಯಲ್ಲಿ
ದೂಕಿ ಬಿಟ್ಟೆಯಲ್ಲ ನನ್ನ
ನೀರು ಸೋಪು ಉಜ್ಜಿ ಮೈಗೆ
ಕೊಳಕಿಲ್ಲ ಕೊರಗಿಲ್ಲ

ಹೀಗೆ ಗೀಚಿದ್ದು
ಅರ್ಥವಾಗದಿರೊ ಸಾಲುಗಳಲ್ಲಿ
ನೀನು ನನ್ನ ಹುಡಕದಿರು
ಕಾಣಸಿಗೆನು ಕೊಳಕಿನಲ್ಲಿ

ಮುದ್ದಿಸುವ ಮನಸ್ಸು



ಕುಳಿತು ಸುಮ್ಮನಿರಲು ಮನವು
ನಿನ್ನನ್ನೇ ನೆನಪಿಸಿದೆ
ಹುಸಿ ಕೋಪ ಬಾಲಿಶ ಕಚ್ಚಾಟದ...
ಗಳಿಗೆ 


 ಕಚಗುಳಿಯ ಮುದನೀಡುತಿವೆ

ಸಲಿಗೆ ಮರೆತ ತಪತಪಿಸುವ ಮನ
ಬಾಹು ಬರಸೆಳೆತಕೆ
ಕ್ಷಣಗಣನೆ ನಡೆಸಿದೆ

 ಕಹಿ ಗಳಿಗೆಗೆ ಮರೆವು ಗುಳಿಗೆ ನೀಡಿ
ಹೊಸ ಕನಸು ಕಟ್ಟಲು
ಹೆಣಗಾಡುತಿದೆ
ನಲುಮೆಯ ಪ್ರೀತಿಯೊಂದೆ ಸಾಕು

 ಕಟುಕ ಮನಸ ಗೆಲ್ಲಲು
ಭಾಷೆ ಭಾವ ಒಂದೆಡೆ ಕೂತು
ಸ್ಪುರಿಸಿದ ಸಂತಸವು
ನೋವ ಮನವ ಗೆಲುವಾಗಿಸಿತು

ನಾನೂ(ನು) ಅಮ್ಮ-ಅರ್ಥವಾಗದ ಜೀವಕ್ಕೆ



ನೀ ಧರೆಗಿಳಿದ ಕ್ಷಣ
ಇರದಾಯಿತು ತಲ್ಲಣ
ಪ್ರೀತಿ ಮನದಲ್ಲಿ ತುಂಬಿತು...
ಸಂತಸ ಇಮ್ಮಡಿಯಾಯಿತು

ಆ ಸಮಯ ಬಂದಿತು

 ಇನ್ನೊಬ್ಬರ ತೆಕ್ಕೆ ನೀನು
ಸಿಗಲಾರದಾದೆವು ದಿನಪೂರ್ತಿ
ಬರಿದಾಗದು ಜೋಳಿಗೆ ತುಂಬಿದ ಪ್ರೀತಿ

ಕಾಳಜಿ ಇದೆ
ನಿನ್ನ ಜೊತೆಯಾಡುವ ಬಯಕೆ ಇದೆ
ತೊದಲು ನುಡಿಯ ಪ್ರತ್ಯುತ್ತರ ಕೇಳುವ ಆಸೆ ಇದೆ
ನಿನ್ನ ನನ್ನ ಎದೆಯಲಿ ಹುದುಗಿಸಿ
ಪ್ರೀತಿಗರೆಯುವ ಹೆಬ್ಬಯಕೆ ಇದೆ
ನಿನ್ನ ತಪ್ಪು ಸರಿಯ ಗುರುತಿಸುವ
ತಿದ್ದುವ ತವಕ ತಾಳ್ಮೆಯಿದೆ
ನಿನ್ನ ಪ್ರತಿ ಹೆಜ್ಜೆಯ ತಾಳೆ ನೋಡುವ ಕಾತುರತೆ ಇದೆ
ನನ್ನ ತಾಯ್ತನ ಜೀವಂತವಾಗೇ ಇದೆ
ನಿನ್ನೊಟ್ಟಿಗಿರುವ ಸಮಯ ಕಡಿಮೆಯನಿಸುತ್ತದೆ
ಆದರೆ ಆ ಸಮಯ ಪೂರ್ತಿ ನನ್ನದೆ
ನೀನು ನನ್ನ ಮಗಳೇ
ನಾನು ನಿನ್ನ ಅಮ್ಮನೇ
ನಾನು ಅಮ್ಮನೇ

ಅಮ್ಮ



ಗುದ್ದಾಟ ಜಿದ್ದಾಟ
ಯಾವ ಅಮ್ಮ ತಾನೇ ಇರುವಳು
ಸಹಿಸುವಷ್ಟು ಮಗನ ಆಕ್ರಂದನ
...
ಸರಿ ತಪ್ಪಿನ ತುಲನೆ
ಯಾವ ಅಮ್ಮ ತಾನೇ ಇರುವಳು
ಸಹಿಸುವಷ್ಟು ಮಗನ ತೊಳಲಾಟ

ದೂರ ಸನಿಹ ಹೇಳಲಷ್ಟೇ
ಸಹಿಸಳಾದಳು ಮಗನ ಸಂಕಟ
ಎಷ್ಟಾದರು ಮಗ ಅಮ್ಮನದಲ್ಲವೇ

ಅಮ್ಮ - ನಾನು


ಮುಂದಿಹುದು ಮಜಲುಗಳು ಹಲವಾರು
ದಾರಿಯ ತೋರುತಿಹಳು ಕೈ ಹಿಡಿದು
ಹೆಜ್ಜೆ ಹೆಜ್ಜೆಗೂ ನನ್ನ ಮೇಲಿನ ಪ್ರೀತಿ...
ಎತ್ತರೆತ್ತರಕೆ ಸಾಗುತಿದೆ ಸಲಲಿತವಾಗಿ


ಹಸಿರು ತುಂಬಿದ ವನಸಿರಿ ಮಧ್ಯೆ
ನಮ್ಮ ಪ್ರಯಾಣ ಸಾಗಿದೆ
ದಾರಿ ಸುಲಭ ಸಾಧ್ಯವೆನಿಸಿದೆ
ಕಾಣಸಿಗದ ಮುಖ ಖುಷಿಯಲಿ ನಲಿದಿದೆ

ಪ್ರೀತಿ ಪ್ರೇಮ ಕಾಳಜಿ ಅಮ್ಮನ
ಒಡಲ ಜೋಳಿಗೆಯಲಿ ತುಂಬಿದೆ
ಮೆಟ್ಟಿಲು ಹತ್ತಲು ಕೈ ಹಿಡಿದ ಅಮ್ಮನ
ಜೋಳಿಗೆಯೇ ಆಯಾಸ ಮರೆಸುತಿದೆ

ದೇಗುಳದ ಬಾಗಿಲು ಸನಿಹವೆನಿಸಿದೆ
ಕರ ಹಿಡಿದ ತಾಯಿಯ ಜೊತೆ
ಬೇರೆಲ್ಲವು ನಗಣ್ಯವೆನಿಸುತಿದೆ
ಅಮ್ಮ ಮತ್ತು ನಾನು ಮೆಟ್ಟಿಲು ಹತ್ತುತಿರಲು

ಮನವಿ



ಅವರಿವರಾಡುವ ಮಾತಿಗೇಕೆ ಬೇಜಾರು
ಸುಮ್ಮನೆ ಕೂರದಿರಲಿ ಲವಲವಿಕೆಯ ಮನಸ್ಸು
...
ಮನೆ ಕೋಣೆ ಚಿಕ್ಕದಾದರೇನಂತೆ
ವಿಶಾಲವಾದ ನಲಿವ ಮನವಿರಲು ಸಾಕಲ್ಲವೇ
ಕೊಳಕು ತುಂಬಿದ ಕೋಣೆ ಸ್ವಚ್ಛಗೊಳಿಸಲು ಒಂದು ದಿನ
ಕೊಳಕು ತುಂಬಿದ ಮನವೆಂಬ ಕೋಣೆ ಸ್ವಚ್ಛಗೊಳಿಸಲಸಾಧ್ಯ ಒಂದು ದಿನ

ನೀನೆನಗೆ ನಾನಿನಗೆ ಪ್ರೀತಿ ತುಂಬಿದ ಮಾತು ಸೂಸಿದ ಗಾಳಿಯಲ್ಲಿದ್ದ ಸಂದೇಶ
ತಪ್ಪು ಸರಿಗಳ ತುಲನೆಯಲ್ಲಿ ಕೂತು ಮರೆಯಬೇಡ ತೊದಲ ಮೊದಲ ಪ್ರೀತಿ ಬಾಲಿಶ
ಸುಖಾಂತ್ಯ ನನ್ನ ಕವನದ ಆಶಯ ಬಯಸಿದ ಜೀವನಕ್ಕಿಲ್ಲ ಸಂಶಯ
ಋಣಾತ್ಮಕ ಭಾವನೆಯ ಕೆಡವಿ ಕಟ್ಟಬೇಕಿದೆ ಖುಷಿಯ ಮಹಲು
ಈಡೇರಿಸಬೇಕಾಗಿದೆ ನನ್ನ ಈ ಮನವಿ

ಮತ್ತೆ ಕಟ್ಟಬೇಕಿದೆ


~~~~~~~~~~~~~~~~~
ಅಲ್ಲೋಲ ಕಲ್ಲೋಲ ಮನವೀಗ ಹಿಡಿತದಲ್ಲಿಲ್ಲ
ರಂಪಾಟ ಚೀರಾಟ ತಾರಕಕ್ಕೇರುತಿದೆ
ಜಟಿಲವಾದ ಬಾಳ ನೌಕೆ ಸಡಿಲವಾಗಿ ತೋರುತಿದೆ...
ಮತ್ತೆ ಕಟ್ಟಬೇಕಿದೆ ನವಿರಾದ ಸವಿಯಾದ
ಭಾವನೆಗಳ ಜೋಡಿಸಿ ಪೋಣಿಸಿ


ವಾಸ್ತವಕೆ ಹೊರತಾಗಿ ಶಾಂತತೆಯ ರೂಪವಿದೆ
ಕೊಳೆ ತುಂಬಿ ಕಳೆ ತುಂಬಿದ ಮುಖ
ಸುಂದರತೆಯ ಮರೆಮಾಚುತಿದೆ
 ಇದೆಲ್ಲವ ಬದಿಗಿಟ್ಟು ಸ್ವಚ್ಛಂದದ
ಬದುಕ ಮತ್ತೆ ಕಟ್ಟಬೇಕಿದೆ

ಧೂಳು ತುಂಬಿ ಮುಸುಕಿದ ಬಾಳ ಪರದೆಯ
ಒಮ್ಮೆ ಅಲುಗಾಡಿಸಬೇಕಿದೆ
ಸುಂದರ ಭಾವಗಳ ಚಂದದ ನರ್ತನ
ನೆನಪಿಸಬೇಕಿದೆ
ಮತ್ತೆ ಕಟ್ಟಬೇಕಿದೆ
ನನ್ನ ಕನಸ ಬಾಳ ಚಪ್ಪರ

ಭರವಸೆ


ಮದುವೆಯೆಂಬ ಮಜಲು ನಮ್ಮಿಬ್ಬರ
ಕೈ ಜೋಡಿಸಿದೆ
ಪರಸ್ಪರ ಭಾವನೆಗಳ ವರ್ಗಾವಣೆಗೆ...
ನಾಂದಿಯಾಗಿದೆ


ಅರಿತು ಬಾಳುವ ಸಂಗತಿ
ನನ್ನ ನಿನ್ನ ಒಂದುಗೂಡಿಸಿದೆ
ಪ್ರೀತಿ ಪ್ರೇಮದ ಪರಿಚಯ
ನಡುವಿನ ಅಂತರಕೆ ಪೂರ್ಣ ವಿರಾಮ ಇಟ್ಟಿದೆ

ಸ್ವೀಕರಿಸಿದೆ ನೀನು ನನ್ನನು ಬಾಳ ಸಂಗಾತಿಯಾಗಿ
ಕರವ ಹಿಡಿವೆನು ಕಷ್ಟ ಸುಖಗಳ ನರ್ತನಕೆ
ರೋಸಿ ಹೋಗುತಿರಲು ನೀನು
ಗ್ಲೂಕೋಸು ನೀರು ನಾನು

ದಾರಿ ಸವೆದಿದೆ ನಿನ್ನ ಜೊತೆ
ಇನ್ನು ದೂರ ಬಾಕಿ ಇದೆ
ನನಗೆ ನೀನು ನಿನಗೆ ನಾನು ಎಂಬ ಮಂತ್ರ
ಸುಖೀ ಜೀವನದ ಯಶಸ್ವಿ ತಂತ್ರ

ಸುಂದರ ಸಂಜೆ ಮತ್ತೆ ತಂದಿರಿಸಿದೆ
ಸುಮಧುರ ಭಾವನೆಗಳ ಚಿತ್ತಾರ
ಆಹ್ಲಾದಕರವಾಗಿದೆ
ನಿನ್ನ ಸಂತೈಸುವ ಪರಿ ಭರವಸೆಯ ನುಡಿ

ಬದುಕು ಬಾಳು


-------------------

ಸಾಗುತಲಿದೆ ಬಾಳ ಪಯಣ
ಹೊಸ ಹಾದಿಯನರಸುತ
ಹಳೆ ಗೂಡನು ಬಿಟ್ಟು ವಾಸ್ತವ್ಯವ ...
ಅರಸುತ



ಬದುಕೆಂಬ ಹೊತ್ತಿಗೆಗೆ
ನವೀನ ಅನುಭವಗಳ ಅಚ್ಚೊತ್ತಲು
ಮಧುರ ಭಾವನೆಗಳ ಪುಟಗಳ
ತಿರುವು ಹಾಕಲು

ಬಾಳ ಕಷ್ಟಗಳು ನೂರಾರು
ಏರಿಳಿತಗಳು ಹಲವಾರು
ಅಲೆಗಳಂತೆ ಬರುವ ಖುಷಿ ದುಃಖಗಳ ಸಮ್ಮಿಲನ
ಬಾಚಿ ತಬ್ಬಿದಂತಿದೆ ಸಂತೃಪ್ತ ಮನ

:😍:♡:😍:

ಬಿಡದೆ ಸವೆಸುವ ಜೀವಕ್ಕೊಂದು ನೆಪ
ಸಂಜೆ ಸೂರ್ಯ ನೆನಪಿಸುವ ಘಳಿಗೆ
ಕಾಯುತ್ತ ಕುಳಿತಂತಿದೆ ಬಿಚ್ಚಿಡಲು...
ನೆನಪುಗಳ ಸುರುಳಿ


ಅವನಲ್ಲಿ ಇವಳಿಲ್ಲಿ
ಕಳೆದ ಸಮಯ ಸರಸವೊಂದೆ
ಸುಂದರ ಬದುಕ ಹೆಣೆಯಲು ಸಾಕು
ಇವಳಲ್ಲಿ ಅವನಲ್ಲಿ
ನೀಡಿದ ಭರವಸೆಯ ಆಲಿಂಗನವೊಂದೆ
ಚಂದದ ನಗು ಮುಖ ತುಂಬಲು ಸಾಕು

ನಡು ರಾತ್ರಿಯ ಪ್ರೀತಿಭರಿತ ಸಂದೇಶ
ನೋಡಲೇ ಬೇಕೆಂಬ ಹಂಬಲ ಹುಟ್ಟು ಹಾಕಿತು
ಪಿಸುಗುಟ್ಟಿ ಚೆಲ್ಲಿದ ನಗು
ಕಾತುರತೆಗೆ ಸವಾಲೆಸೆಯಿತು

ಜಗಳ ಬೇಸರಗಳೇನೇ ಇರಲಿ
ಸುಂದರ ಭಾವನೆಗಳ ಮಿಲನ ಬಯಸಿತು
ಕನಸು ಸಾಕಾರಗೊಳಿಸಬೇಕೆಂಬ ಆಸೆ
ತುಂತುರು ಮಳೆ ಹನಿಯಂತೆ ಮನ ತಟ್ಟಿತು

ಜೀವನ ಬೆಂಗಳೂರಲ್ಲಿ


"------------------------"
ಗಗನ ಚುಂಬಿಸೊ ಕಟ್ಟಡಗಳು
ಕಣ್ಣು ಹಾಯಿಸಿದೆಡೆ ಕಾಣುವ ವಾಹನಗಳ ಪಯಣ
ಅಲ್ಲಲ್ಲಿ ಕಾಣಸಿಗುವ ಮರಗಳು...
ಮಳೆ ತರಲೇ ತರದಿರಲೇ ಎಂಬ ಯೋಚನೆಯಲ್ಲಿರುವ ಮೋಡ

FM ಹಾಡಿಗಿಂತ ಜಾಹೀರಾತುಗಳ ಹಾವಳಿಯಾದರೂ
ವಾಹನಗಳ ಜಂಜಾಟ ಭರಿತ ದಾರಿಗೆ ಸಾಥಿಯಾಗಿದೆ
ಎಲ್ಲ ತರದ ಜೀವನ ರೀತಿ ಕಾಣುತಲಿದೆ
ನನ್ನದ ಹುಡುಕುವುದರಲ್ಲಿ ನನ್ನ ನಾನೇ ಮರೆತಿಹೆ
ಸಂಜೆ ಗೂಡು ಸೇರುವ ಹಕ್ಕಿಯ ಚಿಲಿಪಿಲಿ
ನಾನು ಸಾಗುತಿರುವೆ ವಾಹನಗಳ ಪೀ ಪೀ ಜೊತೆ
ತಡೆ ಹಿಡಿದಿವೆ ಆರ್ಭಟ ಹಸಿರು ಕೆಂಪು ದೀಪಗಳು
ಇಷ್ಟೆಲ್ಲ ಯೋಚನೆಗಳ ಜೊತೆ ಮನೆ ದಾರಿ ಕ್ರಮಿಸಿದೆ
ಸಂಜೆ ಬೆರಗನು ಕೊಂಡೊಯ್ದ ಸೂರ್ಯ
ಶಶಾಂಕನ ತಂಪನ್ನೀಯಲು ರಾತ್ರಿ ಬಂದಾಯಿತು
ನಾಳೆ ನನ್ನ ನಿನ್ನ ಮಾತುಕತೆ
ಮೈ ಮನ ನಿದ್ರಾದೇವಿಗೆ ಕರೆ ನೀಡಿತು

ಅಪ್ಪನಲ್ಲಿ ಮಗಳು


ಪುಟಿ ಪುಟಿ ಕಾಲುಗಳು
ಝಣ ಝಣ ಕಾಲ್ಗೆಜ್ಜೆ ಸುತ್ತಲು
ಅಪ್ಪನ ಕೈ ನನ್ನ ಆಸರೆ...
ನೋಡುತಿಹೆ ಜಗದ ಬಗೆ


ಕನಸುಗಳು ಹೆಣೆದಾಗಿವೆ
ಅಪ್ಪನ ಪ್ರೇರಣೆ
ಕಾಲಿಗೆ ಭಲ ಹೆಚ್ಚಿದೆ
ಮಗಳಿಗಾಗಿ ಸ್ಪುರಿಸಿದ ಪ್ರೀತಿ

ಆಗಸದಷ್ಟು ಎತ್ತರ
ನಾನು ಅಪ್ಪನ ಆಸ್ತಿ
ಧರೆಗೆ ಆಗಮನ
ಬಲಿಯದ ತತ್ತಿ

ಮರೆಯಲಾಗದು ಖುಷಿಯಲಿ
ನೀ ಕೊಟ್ಟ ಪಪ್ಪಿ
ಭರವಸೆ ಇರಲಿ ನನ್ನ ಮೇಲೆ
ತಪ್ಪು ಮಾಡೋದಿಲ್ಲ ಅಪ್ಪಿ ತಪ್ಪಿ

ಅಪ್ಪ
ಸಾಲದ ಪದಗಳಲಿ ಅಡಗಿ ಕುಳಿತಿರುವ
ನೀ ತೋರಿದ ಕಾಳಜಿ ನಲುಮೆ ಭದ್ರತೆ
ಕ್ಷಮೆಗೆ ಅರ್ಹಳಾಗಿರುವೆ
ನಿನ್ನ ಕೈ ಹಿಡಿದು ಬೆಳೆಯುವ ಮಗಳು

ವರುಣಾಧರೆ



ಬಿಸಿಲ ಉರಿಗೆ ತತ್ತರಿಸಿದ ಭೂಮಿಯ ತಾಪ
ಧರೆಯ ಧಗೆಗೆ ತಣ್ಣೀರು ಸಿಂಚಿಸಿದ ಕಾರ್ಮೋಡ
ಕಸಿವಿಸಿ ಬಿಸಿ ಮಾತಿಗೆ ಬಾಡಿ ಹೋದ ಮೊಗ...
ಮನದ ಬೇಗೆಗೆ ತಂಪೆರೆದ ಸುಮಧುರ ಉಲಿ


ಮಳೆ ಬಂತು ಇಳೆಯ ತಬ್ಬಿತು
ಸುಂದರ ಪೃಕೃತಿ
ಸಂದೇಶ ಬಂತು ನಗುವ ಪಸರಿಸಿತು
ಚಂದದ ಗೃಹಿಣಿ

ಮೊದಲ ಮಳೆಯ ಹನಿ
ಮಣ್ಣಿನ ಸುವಾಸನೆ
ಮೊದಲ ಪ್ರೀತಿ ಧ್ವನಿ
ಭಾವನೆಗಳ ಚಲನೆ

ಭರ ಭರ ಪಟ ಪಟ ಠಪ ಠಪ
ಸುಂದರ ಗಾಯನ
ಹೂ ಹಾ ಹ್ಹ
ನಲುಮೆಯ ಉತ್ತರ

ಮಳೆಗೂ ಧರೆಗೂ
ಹೊಂದಿಸಿದ ಕಲ್ಪಿತ ಸಂಬಂಧ
ನನಗೂ ಇನಿಯನಿಗೂ
ಕಪೋಕಲ್ಪಿತ ಕಾಡುವ ಅನುಬಂಧ

ಕಂದ



ಕಂದ ನಿನ್ನ ನಗು
ನನ್ನ ಕನಸ ನನಸಾಗಿಸಿದೆ
ಮುಖಕೆ ತಾಕಿದ ಮುದ್ದು ಮುತ್ತು...
ಬದುಕ ನಶೆಯೇರಿಸಿದೆ


ಪುಟ್ಟ ಕಂದ ನನ್ನ ಸ್ವಂತ
ಅಮ್ಮ ಎಂದು ಕರೆದಿದೆ
ತುಂಟ ನೆಗೆತ ಮೈ ಪುಳಕ
ಈ ಜೀವಕ್ಕೊಂದು ಹೆಸರಿಟ್ಟಿದೆ

ಇರುಸು ಮುರುಸು ತನ್ನದೇ ವಾದ
ಸ್ಪಷ್ಟ ವಿವರಣೆ ನೀಡಿದೆ
ಬೆಳೆದು ನಿಂತು ಬೇರು ಹಿಡಿತ
ಅಚಲ ಸುಫಲವಾಗಲಿದೆ

ಮುದ್ದು ಕಂದನಾಗೇ ಎಂದೂ
ನೀನು ನನ್ನ ರಮಿಸುತಿರು
ಬಿಳಿಯ ಕಾಗದದಂತೆ ನಿನ್ನ ಮನ
ಜೀವನದ ರಂಗು ತುಂಬುತಿರು

....ನಿಗೆ


ಮಧುರ ಭಾವನೆಗಳು ಹಳೆ ನೆನಪುಗಳು
ಈಗೀಗ ಬರಲಾರದವು ಆ ಘಟನೆಗಳು
ಮನ ತಲ್ಲಣ ನವಿರಾದ ಕಂಪನ ...
ತುಟಿಯಂಚಲಿ ಕಿರು ನಗೆ


ಅಂಜಿಕೆಯಲಿ ಸುತ್ತಾಟ
ಹೊಸ ಪ್ರೇಮದ ಒದ್ದಾಟ
ಪಿಸು ನುಡಿ ಮೊದಲ ಸ್ಪರ್ಶ
ಚಿಗುರೊಡೆದ ಪ್ರೀತಿಯ ತೊಳಲಾಟ

ಅಕ್ಕಪಕ್ಕ ಕೂತು ಹೆಣೆದ ಕನಸುಗಳು
ಬರಸೆಳೆದು ಮುತ್ತಿಟ್ಟ ಘಳಿಗೆ
ಪ್ರತಿ ಭೇಟಿಗೆ ಸಿದ್ಧಗೊಳ್ಳುವ ಗೊಂದಲ ಮನ
ಶುರು ಮಾಡಿದ ಕಣ್ಣ ಭಾಷೆ

ತಡಮಾಡದೆ ಗೋಚರಿಸಿದೆ ಸವಿ ಜೀವನದ ತುಣುಕುಗಳು
ಕಣ್ಣಂಚಲಿ ನೀರು ಮುನಿಸು ಸಹಜ
ದೂರ ದೂರ ಮನಸು ಭಾರ
ಸುಂದರ ಸಂಜೆ ಮಿಲನಕೆ ಮುನ್ನುಡಿ ಬರೆದಿದೆ

ಕ್ಷಮೆ ಇರಲಿ


ಬದುಕು ಜಂಜಾಟ
ಆಫೀಸು ಮನೆಗೆ ಬರೀ ತಿರುಗಾಟ
ಖುಷಿ ದುಃಖಗಳ ಆಟ...
ಜೀವನ ಸಮತೋಲನಕೆ ಪರದಾಟ


ಒಟ್ಟಿಗೆ ಕಳೆಯುವ ಸಮಯದ ಕೊರತೆ
ಬರಿದಾಗದು ಪ್ರೀತಿಯ ಒರತೆ
ಶನಿವಾರ ರವಿವಾರ ಬದುಕಿನ ಸಂತೆ
ಕಟ್ಟುವೆವು ಸುಂದರ ಘಳಿಗೆಗಳ ಕಂತೆ ಕಂತೆ

ಬರಿದಾಗುತಿದೆ ಹಂಚಿದ ಪ್ರೀತಿ
ತುರ್ತಾಗಿ ಕೂಡಲೇ ಬೇಕಿದೆ ಮರವ ಸುತ್ತಿ
ಆಸೆ ಒತ್ತರಿಸಿ ನಿಂತಿದೆ ನನ್ನ ನಿನ್ನ ಭೇಟಿ
ಕಾಣಬಹುದೇ ಕನಸ ಸಿನಿಮಾ ರೀತಿ

ಒದ್ದಾಟದ ದೇಹಕ್ಕೆ ಸಾಮೀಪ್ಯ ಸಿಗಲಿ
ಎರಡು ಶರೀರಗಳ ಖುಷಿಯ ಸಾಂಗತ್ಯದಲಿ
ಮನಸ ಚೀರಾಟ ಕಣ್ಣೀರಲಿ
ಕೇಳದೇ ಹೇಳದ ಸಂಗತಿಗಳಿವೆ
ಕ್ಷಮೆ ಇರಲಿ

ಸಾರ್ಥಕ - ಸಂಧ್ಯಾಸಮಯ


ಇಳಿ ಸಂಜೆ ಹೊತ್ತಿಗೆ
ಸೂರ್ಯ ಕೆಂಪಾದನು
ಮರದ ಟೊಂಗೆಯ ನಡುವೆ ...
ಸುಂದರ ಚಿತ್ರ ಬಿಡಿಸಿದನು


ಚಿಲಿಪಿಲಿ ಹಕ್ಕಿಗಳು
ಮರಳಿ ಗೂಡಿಗೆ
ದಣಿದ ದೇಹ
ತಿರುಗಿ ಮನೆಗೆ

ಆಗಷ್ಟೇ ಅರಳಿದ ಹೂವು
ಮುದಗೊಳಿಸುವ ಕಂಪು
ಮನೆಯಲ್ಲಿ ಕಾದು ಕೂತ ಮಗು
ಕಂಡಾಕ್ಷಣ ಕಲ್ಮಷ ರಹಿತ ನಗು

ಅಸಂಬದ್ಧ ರೀತಿ


ಬೇಕು ಎಂಬ ಬಯಕೆ
ಪಡೆಯುವ ದಾರಿ ಸಾಗಿದೆ
ಸೋತು ಮನ ದಣಿದಿದೆ...
ಮಂಕಾಗಿ ಕುಳಿತಿದೆ


ಹರಿದು ಬರುತಿದೆ ಚಿಂತೆಯ ಮಹಾಪೂರ
ನೆಮ್ಮದಿ ಹುಡುಕಿ ಕದಡಿ ತಡಪಡಿಸಿದೆ
ಧ್ವನಿ ಗದ್ಗದಿತ ಮಾತು ತೊದಲು
ಒಣಗಿದ ಮುಖದ ಮೇಲೆ ಕಣ್ಣೀರ ಲೇಪನ

ಆಸೆಯ ಬೆನ್ನೇರಿ ಹೊರಟ ಓಟ
ತುಸು ದೂರದಲಿ ನಿಲ್ಲಿಸಬೇಕು
ಚಿಂತೆ ಬುತ್ತಿಯ ಪಕ್ಕಕೆ ಜರುಗಿಸಿ
ಮನಭಾರ ಇಳಿಸಬೇಕು

ಎಲ್ಲವನೂ ಮೀರಿದ ಸಾರ್ಥಕ ಬದುಕಿದೆ
ನೊಂದ ಮನಕೆ ಖುಷಿಯನುಭವಿಸುವ ಹಕ್ಕಿದೆ
ಎಲ್ಲ ಮರೆತು ಸಾಂಗತ್ಯಕ್ಕೆ ಕರೆ ಹೋಗಿದೆ
ವಿಚಾರ ರಹಿತ ತಟಸ್ಥ ಮನ ನನ್ನದಾಗಿಸಬೇಕಿದೆ

ನನ್ನವನು


ನಿನ್ನೊಂದು ಮಧುರ ಮಾತು ಸಾಕು
ನನ್ನಲ್ಲಿ ಹುಟ್ಟುವುದು ಚೈತನ್ಯ
ಮೃದು ವಚನ ನೀಡಿದರೆ ಸಾಕು...
ನನ್ನಲ್ಲಿ ಸಾಯುವುದು ವೈರಾಗ್ಯ


ಸಂಜೆ ತಂದ ಸಣ್ಣ ಸಿಹಿ ಪೊಟ್ಟಣ ಸಾಕು
ಇಂಗಿಸೀತು ತಲೆನೋವು ತಂದ ಹಸಿವ
ವಿಹಾರದಲ್ಲಿ ನೀಡಿದ ಭರವಸೆಯ ಮಾತು
ಒರೆಸೀತು ಧರಧರನೆ ಇಳಿದ ಕಣ್ಣೀರ

ನೀ ಹೇಳಿದ ನುಡಿ "ನನಗೆ ನೀನಲ್ಲದೆ ಬೇರಾರು"
ಕಂಡ ಕನಸೆಲ್ಲವ ಬಾಚಿ ತಬ್ಬಿತು
ಕಣ್ಣಲ್ಲೇ ಮಾತಾಡಿದರೆ ಸಾಕು
ಉಳಿದ ಪ್ರಶ್ನೆಗೆ ಉತ್ತರ ಸಿಕ್ಕಿತು

ಜೀವನದ ಹಾದಿಯಲಿ
ಭೇಟಿಯಾಗಲೇ ಬೇಕು ಮುನಿಸು ಮುರಿಸು
ಪಟಕ್ಕನೆ ಕೊಡಲೇ ಬೇಕು ತುಟಿಯ ಒತ್ತೊಚ್ಚು
ಬಾಳ ಹೊಲಿಗೆಗೆ ನಾನು ದಾರ ಅವನು ಸೂಜಿ
ಸುಂದರ ವಸ್ತ್ರದ ವಿನ್ಯಾಸ

ನನ್ನೆಲ್ಲ ಆಸೆಗೆ ರೂವಾರಿ
ಅವನು ಹೆಣೆದ ಕನಸಿಗೆ ನಾನಾದೆ ಮುನ್ನುಡಿ

ಆ ರಾತ್ರಿ


ಧಾರಾಕಾರ ಮಳೆ ಶುರುವಾಯಿತು
ಗುಡುಗು ಸಿಡಿಲು ತನ್ನೊಟ್ಟಿಗೆ ಕರೆ ತಂದಿತು
ಬೆದರಿದ ಮಗು ಅಮ್ಮನ ಬಿಗಿದಪ್ಪಿತು...
ತಾಯಿ ಸಾಂತ್ವನ ನಿದ್ರಾ ದೇವಿಯತ್ತ ಸೆಳೆಯಿತು


ಒಣಗಿದ ಧರಿತ್ರಿಯ ಜೀವ ಸಂತ್ರಪ್ತಗೊಂಡಿತು
ಜಗಳವಾಡಿ ಮಲಗಿದ ಜೀವ ಪ್ರೀತಿ ಸ್ಪುರಿಸಿತು
ಕೋಪ ತಾಪಗಳು ಬೆಚ್ಚಗೆ ಹೊದ್ದು ಮಲಗಿದವು
ಸುಂದರ ರಾತ್ರಿ ಮಧುರ ಸ್ವಪ್ನಗಳ ಹೆಣೆಯಿತು

ಸಂಭಾಷಣೆ


ದಿನ ಉರುಳುತಿದೆ
ಒದ್ದ ಕಾಲ್ಚೆಂಡಿನಂತೆ
ತುಂಬುವ ಬಾರೊ ...
ಸವಿ ನೆನಪುಗಳ ಜೋಲಿ


ಮೂರು ದಿನಗಳ ಬದುಕಂತೆ
ಖುಷಿ ಕ್ಷಣಗಳಿಗೇಕೆ ಬರಗಾಲ
ನನ್ನ ಕನಸು
ಜೋಲಿಯಲ್ಲಿರಬೇಕು
ಬರೀ ಸಾರ್ಥಕತೆಯ ಭಿತ್ತಿ ಪತ್ರಗಳು

ಓದುವ ಹವ್ಯಾಸ
ಬಿಡುವಲ್ಲಿ ಬಿಡದೆ ನಗಿಸಬೇಕು
ಖುಷಿ ಪಡಿಸಬೇಕು
ಓದಿದ ಎಲ್ಲ ಲಕೋಟೆಯ
ನೆನಪುಗಳು

ಮಿತಿ ಇಲ್ಲದ ತಿರುಗಾಟ
ಊರ ಮೂಲೆ ಮೂಲೆಯಲ್ಲಿ ತೆಗೆದ
ನನ್ನ ನಿನ್ನ ಚಿತ್ರಪಟಲ
ನಗೆಭರಿತ ಮಾತುಗಳು
ಕುಚು ಕುಚು ಮಾಡಿದ
ಸಂದೇಶಗಳು

ರಮಿಸಿ ಪ್ರೀತಿಮಾಡೋಣ
ಹಗೆ ಸೇಡಿಗೆ ತಡೆ ಹಿಡಿಯೋಣ
ಸಮ ಬೆಸ ಆಟ ನಿಲ್ಲಿಸಿ
ಜೀವನದ ರಸ ಸವಿಯೋಣ

ನಮಗಾಗೆ ಬರೆದಂತಿವೆ
ಸಿನಿಮಾ ಹಾಡುಗಳು
ನನ್ನ ಧ್ವನಿಗೆ ನೀನೇ ಕೊರಳು
ನಿನ್ನ ಕನಸಿಗೆ ನಾನಾಗುವೆ ರುಜು
ನಾವಿಬ್ಬರು ನಡೆಯುವ ಹೆಜ್ಜೆಗೆ
ಗೆಜ್ಜೆ ಕಟ್ಟುವ ಸಂಭ್ರಮ
ಸವಿ ಜೇನು ತಯಾರಿಯಲ್ಲಿವೆ
ಹೂವು ಭ್ರಮರ

ಪ್ರೀತಿ ಚಿತ್ತಾರ


ಬಲಿತ ನನ್ನೊಳಗಿನ ಕನಸಿಗೆ
ಸಂಗಾತಿಯ ಒಡನಾಟ
ಬೆಳವಣಿಗೆಯ ನೋಟ...
ರೆಕ್ಕೆಯ ಪಟ ಪಟ


ಚೈತನ್ಯದ ಚಿಲುಮೆ
ಹೊಸ ನೆತ್ತರ ಸಂಚಲನ
ಕಾದಾಡಿ ನಲಿದ ಮನಕೆ
ಸಂಭ್ರಮದ ಆಲಿಂಗನ

ಬಾನಿಗೆ ರವಿಯ ಮೆರಗು
ಕಂಪಿಸಿದ ದನಿಗೆ ಬೆರಗು
ಹೊಸ ಹಾಡಿನ ಗುನುಗು
ಮಿಡಿದ ಹೃದಯದ ಕೂಗು

ಬಿಳಿ ಹಾಳೆ


ಕಪ್ಪು ಶಾಯಿ ಸುಂದರ ಅಕ್ಷರ
ಮೂಡಿಸಿಲ್ಲವೇ

ಶುಭ್ರ ವದನ ಬಿಳಿ ವರ್ಣ...
ಕಪ್ಪು ಬೊಟ್ಟು ನಾಣ್ಯದಗಲ ಕೆನ್ನೆ ಮೇಲೆ
ಸುಂದರವಲ್ಲವೇ


ಸ್ವಚ್ಛಂದ ಆಕಾಶ
ಕಾರ್ಮೋಡ ಅಲ್ಲಲ್ಲಿ
ಮಳೆ ಬಂತಲ್ಲವೇ

ತುಲನೆ ಸಲ್ಲದು
ವರ್ಣಿಸಲಸಾಧ್ಯ ಸುಂದರ
ಕಪ್ಪು ಬಿಳುಪು ಪರದೆಯ
ಚಿತ್ರಗಳೇ ಚಂದ

FB post

ಆಹಾ ಬೆಂಗಳೂರು
ಮಳೆಗೆ ಸಜ್ಜಾದ ನಿನ್ನ ವಾತಾವರಣ ಸುಂದರ
ಸಂಜೆಯ ತಂಪು ತಂದಿದೆ ಇನ್ನಷ್ಟು ಸೊಬಗು
ಮನೆ ಸೇರುತಿವೆ ದಣಿದ ದೇಹ
ಹೆಚ್ಚಾಯಿತೇ ಇಳೆ ಮಳೆಯ ಮೋಹ

ಸವಿ ನೆನಪುಗಳು - ೧


ಹೀಗೆಯೇ ಬರೆದಿಹುದಾ ವಿಧಿಯ ಬರಹ
ಕಷ್ಟದ ನನ್ನ ನಿನ್ನ ವಿರಹ
ಸುಂದರ ಘಳಿಗೆಗಳು...
ಮರೆಸುತಿದೆ ಬಾಳ ನೋವ

ಸುತ್ತಾಟ ಮುದ್ದಾಟ ಬೇಕಷ್ಟಿವೆ
ಸಿಟ್ಟು ಜಗಳ ವಾದ ಇರಲೇ ಬೇಕಲ್ವ
ಮೌನ ಮುರಿದು ಮಾತಿನ ನಂಟು
ಜೀವನವು ಕಚಗುಳಿಯ ತುತ್ತು

ನೀ ಕೊಟ್ಟ ಮೊದಲ ಉಡುಗೊರೆ
ಕಂಡೆ ನಿನ್ನ ಕಣ್ಣ ತವಕ
ನಾನು ನಾಚಿ ನೀರೆ ಕನ್ನಿಕೆ
ಪ್ರಣಯ ಬಾಳ ಜಟಕ

ಸವಿ ನೆನಪುಗಳು - ೨


ನಂದು ನಿಂದು ಮೊದಲ ಮುಖತಃ ಭೇಟಿ
ನಾಚಿಕೆಯ ಮುದ್ದೆ ನಾನು
ಎದೆ ಬಡಿತ ಲೆಕ್ಕಕ್ಕಿಲ್ಲ ಕೋಟಿ...
ಸ್ಪುರದ್ರೂಪ ಹುಡುಗ ನೀನು


ತಡವರಿಸಿದ ಮಾತು
ಎಲ್ಲವನು ಹಸ್ತಾಂತರಿಸಿದ್ದ
ಜಂಗಮವಾಣಿಯ ಸಂದೇಶಗಳು
ನಿನ್ನವಳಾಗಿದ್ದೆ ಆಗಲೇ ಸೋತು
 ಎಲ್ಲವನ್ನು ವೃತ್ತಾಂತರಗೊಳಿಸಿದ್ದ
ನಲುಮೆಯ ಮೆಲು ನುಡಿಗಳು

ಬರಿದಾಗದ ಮಾತಿನ ಕಂತೆ
ಸಮಯದ ಪರಿವೇ ಇಲ್ಲ
ಕನಸ ಹೆಣೆಯೋದೊಂದೇ
ಮಂದಹಾಸಕ್ಕೆ ಕೊರತೆ ಇಲ್ಲ

ದಿನವೂ ಹೊಸ ಪುಸ್ತಕದ ಹಾಳೆ
ಪದಪುಂಜಗಳ ಬಿತ್ತಳಿಕೆ
ಖುಷಿಯಾಗಿರುವ ಕಾರಣ ನೀನೇ
ಮುದ್ದುಗರೆಯುವ ಕಲಿಕೆ

ವರುಷಗಳುರುಳಿವೆ
ಸಂತಸದ ಕ್ಷಣಗಳು ಇನ್ನೂ ಇವೆ ಹಸಿಯಾಗಿ
ಕಡಿಮೆಯಾಗದಿರಲಿ ಪ್ರೀತಿಯ ಸಿಂಚನ
ಸಿಗಬಾರದೇ ಒಮ್ಮೆ ಮೊದಲ ಭೇಟಿಯಾಗಿ

Vyapti

ಮೊಗೆದಷ್ಟು ಪ್ರೀತಿ
ಬೊಚ್ಚು ಬಾಯಿಯ ನಗು
ದಿನವೂ ಅಮ್ಮಂದೇ ಸ್ತುತಿ
ಎಲ್ಲರ ಮುದ್ದು ಆ ಮಗು
...
ಕಾಡುವಳು ಅಮ್ಮನ ಸೆರಗು ಹಿಡಿತ
ಆಕೆಯದೋ ಮನೆ ಕಚೇರಿಯಲಿ ದುಡಿತ
ಅಮ್ಮನ ಕಣ್ಣಂಚಲಿ ನೀರು
ಮಗು ಬೇಸರದಲಿ ನೋಡಿತು ಸೂರು

ಕಳೆದ ಪ್ರತಿ ಕ್ಷಣವೂ ಅಮೋಘ
ಎದೆಯಲಿ ಹುದುಗಿಸಿ ಮುದ್ದಿಸಿದ ಮೊಗ
ತಡಮಾಡದೇ ಬಂದಪ್ಪುವಳು
ಅವಳ ನಿಷ್ಕಲ್ಮಷ ನಗುವಲ್ಲಿ ಮೆರೆಸುವಳು

ಸೃಷ್ಟಿಸಿಹಳು ಅವಳದೇ ಭಾಷಾ ವ್ಯಾಕರಣ
ದಿನವೂ ನಮಗೆಲ್ಲ ಹೊಸ ಶಬ್ದಗಳ ಅನಾವರಣ
ಎಲ್ಲೆಲ್ಲೂ ಕಾಣುವೆ ಮನಕೆ ಹತ್ತಿರದ ನೆನಪ ಪರದೆ
ಅಪ್ಪನ ಮಡಿಲಲೂ ಆಡುವಳು ಖುಷಿಯ ಸಂಗತಿ ಅದೇ

ಭಾವಾಪಹರಣ


ಬದಲಾವಣೆ ಹಾಜರಿ ಹಾಕಿದೆ
ಮನವೇಕೋ ಹಕ್ಕಿ ತರಹ ಹಾರಿದೆ
ಕಚಗುಳಿ ಇಡುತ ಹೃದಯ ತಾಳ ಹಾಕಿದೆ...
ಹೊಸ ರಾಗದ ಅಲೆಯಲಿ ದೇಹ ನರ್ತಿಸಿ ದಣಿದಿದೆ


ಎಂದಿಗಿರದ ಸಂಜೆ ಸೊಬಗ ಹೆಚ್ಚಿಸಿದೆ
ಕೂಡಿ ಕಾದಿಟ್ಟ ಕನಸ ಗರಿಗೆ ಬಲ ಬಂದಿದೆ
ಭರವಸೆಯ ನಲುಮೆ ಕುಣಿದು ಕುಪ್ಪಳಿಸಿದೆ
ಭಾವಗೋಚರ ಸುಖ ನಿದ್ರೆಯನು ಕಸಿದಿದೆ

ಸಾಗುತಿಹ ಪ್ರತಿ ದಾರಿ ತರತರಹ ಭಾವನೆ ಹುಟ್ಟು ಹಾಕಿದೆ
ಬಳಿ ಬಂದು ಭುಜಕೆ ಆನಿಸಿ ಕನಸ ತುಣುಕ ವಾಚಿಸಿದೆ
ಚುಂಬಕ ರೋಚಕ ತಂದಿರಿಸಿದೆ
ಈ ಕ್ಷಣ ನನ್ನದೇ ಸುತ್ತ ಸುತ್ತುತ್ತಿದೆ

ನಾನು ಮತ್ತೆ ಮಳೆ


ಮೋಡ ಕವಿದು ನೀಲಾಕಾಶ ಮಾಯವಾಗಿದೆ
ಭೂಮಿ ಟಪ ಟಪ ಮಳೆ ಹನಿಯ ಮುತ್ತಿಗೆ
ಮಣ್ಣ ಸುವಾಸನೆ ಪಸರಿಸಿತು
...
ಉಕ್ಕಿ ಬಂದ ಪ್ರೀತಿ ಎದೆಯಲ್ಲುಳಿಯದೆ
ಸಾಲು ಸಾಲಾಗಿ ಪದಗಳಲಿ ನಲಿಯಿತು
ಇಮ್ಮಡಿ ಹರ್ಷ ನಗುವ ಗೀತೆ ಹಾಡಿತು
ಮೋಡ ಮಳೆ ಹಾಡಿಗೆ
ನಾನಾದೆ ಕವಿಯತ್ರಿ
ಬಟ್ಟೆ ಒದ್ದೆ ಮೈ ತೋಯ್ದು
ಮರೆತು ತರದ ಛತ್ರಿ

ವರ್ತಮಾನ ವರದಿ


ಮೋಡ ಕವಿದ ವಾತಾವರಣ
ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ
ಅವನ ಅವಳ ಭೇಟಿ...
ಒಲವಾಗುವ ಸೂಚನೆ

ಮೋಡ ಮೋಡಗಳ ಘರ್ಷಣೆ

 ಮಳೆಯ ಆರ್ಭಟ
ಕಣ್ಣುಗಳ ಮಿಲನ
ಪ್ರೇಮದ ಅಂಕುರಣ
ಗುಡುಗು ಮಿಂಚು

 ಬುವಿಯ ಆಸ್ವಾದನ
ಆಕಾಶದ ನರ್ತನ
ಮೆದು ಮಾತು ನಾಚಿ ತುಸು
ಸಂಭ್ರಮಿಸಿದ ಮನ
ಬಾಳ ಪ್ರೇಮ ಸಿಂಚನ

ಮರವಾಗಿ ನಾನು


ಬಿದ್ದೊರಗಿದ ಬೃಹದಾಕಾರದ ಮರ
ಆತ್ಮಹತ್ಯೆಯೇ? ಹತ್ಯೆಯೇ?
ಏನೂ ತಿಳಿಯದ ಮೂಕವೇದನೆ...
ಹಸಿರು ಎಲೆಗಳು ಮಣ್ಣಲ್ಲಿ ವಿಲೀನ


ಬರಲಿವೆಯಂತೆ ಗಗನಚುಂಬಿ ಕಟ್ಟಡಗಳು
ಮನುಷ್ಯರೆಲ್ಲ ಸೇರಿ ಮೋಜು ಮಾಡುವರಂತೆ
ಒಣ ಹವೆ ಕಲ್ಮಷ ಹೊಗೆ
ದಿನ ನೂಕಲೇಬೇಕು ವ್ಯಥೆ

ನಿನ್ನ ಉಸಿರು ನನ್ನ ನಿಟ್ಟುಸಿರು
ಬಿಸಿಲಿಗೆ ನೆರಳೇ ಆಸರೆ
ಕದ್ದು ಆಲಿಸುವೆ ಪ್ರೇಮಿಗಳ ಭಾಷೆ
ಕೆತ್ತಿರುವರು ನನ್ನ ಕವಚ ಸಾಕ್ಷಿಯಂತೆ

ಅಳಲು ಕೂಗು ಆರ್ತನಾದ
ಕಿವುಡನಾದನೆ ಮನುಜ
ಉಳಿಸಿರಿ ಬೆಳೆಸಿರಿ ಬೆಳೆಯಿರಿ
ಪ್ರತಿಧ್ವನಿಸಬೇಕು ನಿತ್ಯ

ಶಾಲೆಯ ಚೂರು ನೆನಪು


ಮನುಷ್ಯನ ಬಹು ಸುಂದರ ಘಟ್ಟ
ಮರೆಯಲಾಗದು ಹತ್ತಿದರು ಚಟ್ಟ
...
ಅಮ್ಮ ಮೊದಲ ಗುರು
ಶಾಲೆ ಮನೆಯ ನಂತರದ ಕಲಿಕಾ ಮಜಲು
ಅಕ್ಕೋರು ಮಾಸ್ತರು ದೇವರಿಗಿಂತ ಮಿಗಿಲು
ಅವರ ವಿಶ್ಲೇಷಣೆಯೆ ದೇವ್ರು ಬರೆದಿಟ್ಟ ಉಯಿಲು
ಜೈ ಭಾರತ ಜನನಿಯ ತನುಜಾತೆ
ಶುರುವಾಗಲೇ ಬೇಕು ದಿನಾ ಹೀಗೆ
ಪಂಚಾಂಗ ಉವಾಚ ಸುದ್ದಿ ಪತ್ರಿಕೆ ಓದು
ಎಲ್ಲರೊಂದಿಗೆ ದಿನದ ಶುರು
ಸುಂದರ ಚುಕ್ಕಿ ರಂಗೋಲಿ ಕಂಗೊಳಿಸಿದೆ
ಪಾಳಿಯಲಿ ಸೇದಿದ ನೀರು ಡ್ರಮ್ ತುಂಬಿಸಿದೆ
ಗೆಳತಿ ಗೆಳೆಯರೊಟ್ಟಿಗೆ ಓದಿ ಕಲಿತ ಆಟ
ಅಚ್ಚು ಮೂಡಿಸಿದೆ ಆಗಲೇ ಮನಸಿನ ಪಟ
ಎಲ್ಲ ವಿಷಯಗಳ ಹೂರಣ ಕಚ್ಚಾ ಪಟ್ಟಿ
ಆಯಾ ವಿಷಯಕ್ಕೆ ಹೆಸರು ಬರೆದಿಟ್ಟ ಪಟ್ಟಿ
ಕಡ್ಜಿ ಬಳಪ ಪಾಟಿ ಸ್ಲೇಟು
ಮತ್ತೆ ಮತ್ತೆ ಒರೆಸಿ ಬರೆಯುವ ಅಭ್ಯಾಸ
ಜೋರು ಮಳೆಗೆ ಅರ್ಧದಲ್ಲಿ ನಿಲ್ಲಿಸಿದ ಪಾಠ
ರೇನ್ಕೋಟು ಮೈ ಮುಚ್ಚಿದೆ
ಜನಗಣಮನ ಗೀತೆ ಜೋರಾಗಿ ಘಂಟೆ ಸದ್ದು
ಪಾಟಿಚೀಲ ಹೊತ್ತು ಮನೆಗೆ ಓಡಿದ ನೆನಪು

ಸಂಜೆಯ ಒಂದು ಘಳಿಗೆ


ಕೆಂಪು ಬಣ್ಣ ವೇಗದ ಮಿತಿ ನಿಯಂತ್ರಿಸಿದೆ
ವಾಹನಗಳು ಸಾಲುಗಟ್ಟಿ ನಿಂತಿವೆ
ಆಂಬುಲೆನ್ಸ್ ಸದ್ದು ಹೃದಯದ ಬಡಿತ ಹಿಡಿದು ನಿಲ್ಲಿಸಿದೆ...
ದಾರಿ ಕೊಟ್ಟು ಮಾನವೀಯತೆ ಮೆರೆಯುತ್ತಿರುವ
ಬೆಂಗಳೂರಿನ ನಿವಾಸಿಗಳು
ನಾ ಕಂಡಂತೆ ಸಂಜೆಯ ಸಾರಿಗೆ ಪ್ರಯಾಣ
ಇದೆಲ್ಲ ಬರೆಸಿದೆ

ಮುಂಜಾನೆಯ ಪ್ರೀತಿ ಸ್ಪುರಣ


ನಿನ್ನ ನೆನೆದ ಹಾಗೆಯೇ
ಮನ ಕುಣಿದಾಡಿದೆ
ನಿನ್ನೊಟ್ಟಿಗೆ ಸಮಯ ವಿಸ್ತರಣೆ...
ಇನ್ನಷ್ಟು ಖುಷಿ ಹೆಚ್ಚಿಸಿದೆ


ಸಲುಗೆ ಬೆಳೆದ ರೀತಿ
ಪರಸ್ಪರ ಪ್ರೀತಿ ದ್ವಿಗುಣಗೊಳಿಸಿದೆ
ತಬ್ಬಿ ಇಬ್ಬಿಬ್ಬಾದ ರೀತಿ
ಮನ ಹಗುರವಾಗಿಸಿದೆ

ಭೇದಭಾವ


ಎರಡು ಜೀವಗಳ ಮಿಲನ
ಮನುಷ್ಯ ಜೀವ ಸೃಷ್ಟಿ
ಗುಡುಗು ಮಿಂಚು ಗಾಳಿ...
ಇಳೆಗೆ ವೃಷ್ಟಿ

ಭಾವನೆಗಳು ಬೇರೆ ಬೇರೆ
ಆದರೂ ಬಾಳ ಕರೆ ಒಂದೇ
ಯೋಚನೆಗಳು ವಿಧ ವಿಧ
ಆದರೂ ಒಂದಾಗಿಸಿದೆ ಬಂಧ
ದೂಷಿಸಿ ವಿಂಗಡನೆ ನಿಷಿದ್ಧ
ಅವನೂ ಒಳ್ಳೆ ಭಾವನಾಜೀವಿ
ಇವಳು ಜೋಡಿಸುವಳು ಜೀವನ ಗಾಲಿ
ಸಾಗಿ ಬಂದಿದೆ ಕ್ರಮಿಸಿದ ದಾರಿ
ಅಡೆ ತಡೆ ಅಲ್ಲಲ್ಲಿ ಮಾಮೂಲಿ
ಹೊಂದಿಕೊಂಡು ಹೋಗುವುದೇ ರೂಢಿ
ಹಾಗೆಯೇ ತಣ್ಣಗಾಗುವುದು ನಿನ್ನೆಯ
ಕೋಪ ತಾಪಗಳು ತೀಡಿ
ನಾನು ಬರೆದಿಹೆ ಅವಳ ಅವನ ಹೆಸರ
ಮಾದರಿ ಜೋಡಿ

FB post

ಮಳೆ ಬಂದು ಇಳೆ ತೊಯ್ದು ನಿಂತಿದೆ
ತಂಪು ಗಾಳಿ ಬೀಸಿ ಮನ ತೊಯ್ದಾಡಿದೆ
ಕಪ್ಪು ಮೋಡ ನೀರ ಸುರಿಸಿ ಧೂಳಡಗಿಸಿದೆ
ಮುಪ್ಪು ಹದಿ ಹರೆಯ ನೆನಪು ನೆನಪಿಸಿದೆ
...
ನೆನಪೊಂದು ಮೆಲ್ಲನೆ ತೇಲಿ ಬಂದು
ಮನವ ಮುದ್ದಾಡಿ ನಗು ಒತ್ತರಿಸಿ ನಿಂತಿದೆ
ನವಿರಾದ ಸಲುಗೆ ಬಳಿ ನಿಂತು
ಸಲ್ಲಾಪ ನಡೆಸಿ ಲವಲವಿಕೆ ಕರುಣಿಸಿದೆ

ಮಳೆಗಾಲದ ಮಳೆ ಖುಷಿ ಪಡಿಸದು
ಮಳೆ ಸೃಷ್ಟಿಸಿದ ತಿಳಿ ವಾತಾವರಣ ಇಷ್ಟ ಬಲು
ಕಿಡಕಿ ಮುಚ್ಚದೆ ಗಾಳಿ ಹೀರುವ
ಸಾಗುತಲಿರುವ ಹಾದಿಗೆ ಸಿಹಿ ಭಾವ ನೀಡುವ

ನಾ-ನೀ ಕಂಡಂತೆ


ಅಲ್ಲೊಂದು ಗೊಂದಲ
ಅವನು ಕಂಡಂತೆ ವಿಷಯ ಗೃಹಿಸಿಹನು
ಇವಳು...
ನನಗೆ ಸರಿ ಅನಿಸುತಿದೆ ಆತನದೇ ತಪ್ಪು
ಎಂದು ನಂಬಿಹಳು
ಗೊಂದಲಕೇನು ಗೊತ್ತು
ಶಾಂತಿ ಕದಡಿದೆ ಎಂದು
ಊಹಾಪೋಹಗಳ ಅಡಿ
ಸತ್ಯ ಅಡಗಿ ಕುಂತಿದೆ
ಇಲ್ಲಿ ಸರಿ ತಪ್ಪುಗಳ ಆಟ
ಗೊಂದಲಗಳ ಕದನ
ಯಾರಿಲ್ಲ ಯಾರ ಪರ
ಸಡಿಲು ಜಟಿಲ ಕೊಂಡಿ
ರಾರಾಜಿಸುತಿಹುದು
ಅವನು ಕಂಡಂತೆ
ಇವಳು ಕಂಡಂತೆ
ಕಾಣಿಸದೆ ಎಲ್ಲ ಉಳಿದವರು ಕಂಡಂತೆ
ಸತ್ಯ ಕೇಳದೆ ಹೇಳದೆ
ವಿಲ ವಿಲನೆ ಒದ್ದಾಡುತಿರುವ ಬಡ ಜೀವ
ಸಮಯ ಸಾಧಕರ ಕೊಂಡಿ ಕಳಚುವ
ಹೋರಾಟ

ನೋವು


ನೋವಾಯಿತೇ
ನೀನು ಅನುಕರಿಸಿದ್ದನ್ನೇ
ನಿನಗೆ ಅನುಸರಿಸಿದೆ...
ಬೇಕಿಲ್ಲ ಕ್ಷಮೆಯಾಚನೆ
ನನ್ನ ನಿನ್ನ ಭಾವನೆಗಳ ಸಂಘರ್ಷ
ವಿಪರೀತ ಅಬ್ಬರ
ಕಣ್ಣೀರ ಪ್ರತಿಕ್ರಿಯೆ
ತಂತಿ ತುಂಡಾದ ನೋವು

ಏನಿಲ್ಲ - ಪ್ರೀತಿ ಸಾಕು


ಇದೆಲ್ಲರ ಅವಶ್ಯಕತೆ ಏನು
ಕೊನೆಯಲ್ಲಿ ನೆಮ್ಮದಿಯ ಕೊರತೆ
ಕಂಡಾಗ ಹೇಳಿದ್ದೇನು ...
ಮಾತಿಗೆ ಮಾತು ಕೊನೆ ಹೇಗೆ

ಘಟನೆಗಳು ಜರುಗುತ್ತವೆ
ಬಾಳ ಹಾದಿ ಸಾಗುತದೆ
ಸೆರೆಯಾಳಾಗದೆ
ಸಂಕೋಲೆ ಮುರಿದು ಹಕ್ಕಿಯಾಗು
ಎಲ್ಲವೂ ಕ್ಷಣಿಕ
ದುಡುಕದಿರು ಮರುಗುತ
ಜೀವನ ಉಬ್ಬು ತಗ್ಗುಗಳ ಚಲನ
ಆಗಲೇ ಬೇಕು ಅಪನಂಬಿಕೆ ರಚ್ಚು
ಕಹಿ ನೆನಪುಗಳ ದಹನ
ಪ್ರೀತಿಯೊಂದೆ ಸಾಕು
ಲವಲವಿಕೆಯ ಡಮರು ಬಡಿಯಲು

ಹೆಸರಿಡದ ಪ್ರೀತಿ


ಕಾಡಿರದ ಪ್ರೀತಿಯಲಿ
ನನ್ನಿನಿಯನ ಹುಡುಕಾಟ
ಒಲವಿರದ ಪದಗಳಲಿ
ರಸಿಕತೆಯ ಒದ್ದಾಟ
*******
ಬಲವಂತದಲಿ ಹುಟ್ಟದು ಪ್ರೀತಿ
ಮರುಭೂಮಿಯ ಓಯಸಿಸ್
ಹುಡುಕುತ ಸಂಯಮದಿ
ಧಾರೆ ಎರೆದು ಹಿಡಿದಿಟ್ಟ ರೀತಿ
*******
ವ್ಯಾಖ್ಯಾನ ಕೊಟ್ಟಿಲ್ಲ
ಕಾರಣವು ಗೊತ್ತಿಲ್ಲ
ಅವರಿಬ್ಬರು ಕಂಡ
ಪ್ರೇಮಾಂಕುರವೇ ಚಂದ
********
ದೋಷಗಳು ಹೊಸತಲ್ಲ
ಜಗಳಕ್ಕೆ ಪೂರಕವಲ್ಲ
ರೂಪುಗೊಳ್ಳುತಿದೆ ಬದುಕು
ಹೊಸತನದಿ
ಕೇಳುತಿದೆ ನೋಡುತಿದೆ ಅವರಿಬ್ಬರನು
ಶರಧಿ
*********
ಕೋಪದಲಿ ಬೈದಿಹನು
ವಾದ ಮುಂದುವರೆದಿಹುದು
ಆಮೇಲೆ ಸಂತೈಸಿ
ಬೇಸರವ ಮರೆಸಿಹನು
ನವಿರಾದ ಹಿತ ಭಾವ ಮನ ತುಂಬಿ
ಹೊಸ ರಾಗ ರಚಿಸಿಹನು
**********
ಅವನಲ್ಲಿನ ನೂನ್ಯತೆ
ಅವಳಲ್ಲಿನ ತುಂಟಾಟ
ಇಬ್ಬರ ಮಧ್ಯದಲಿ ಕೊಂಡಿಯಾಗಿದೆ
ಹೊಸ ಜಗವ ಹೊಸ ರೀತಿಯಲಿ
ನೋಡುತ ಮೈಮರೆತು
ಖುಷಿಯನ್ನು ಪಸರಿಸಿ
ಹಿತ ನೀಡಿದಂತಿದೆ
ಹೆಸರಿಡದ ಪ್ರೀತಿ
************