ಹೆಣ್ಣು ನೀನು ಜಗದ ಮಾಯಾ ಸುಂದರಿ
ತೋರುತಿಹೆ ಎಲ್ಲೆಲ್ಲೂ ನಿನ್ನ ಪರಿ
ಆದಿ ಮಾತೆಯಾಗಿ ಪೂಜಿಸಲು ನಿನ್ನ
ಭುವನ ವಸುಂಧರೆಯಾಗಿ ತನ್ನ
ಮನೆಯ ದೀಪಕೆ ನೀನೆ ಎಣ್ಣೆ
ನಿನಗೆ ಸರಿ ಸಾಟಿಯಿಲ್ಲ ಹೆಣ್ಣೇ
ಮನ ಮನೆಯ ತುಂಬಿದೆ
ನಲಿವು ನಗುವ ಪಸರಿಸಿದೆ
ಅಕ್ಕರೆಯ ಅಕ್ಕನಾಗಿ
ಮುದ್ದಿನ ತಂಗಿಯಾಗಿ
ತಮ್ಮನಿಗೆ ಬಲವಾಗಿ
ಅಪ್ಪನ ಮನಸಿಗೆ ಮುದ ನೀಡಿ
ಅಮ್ಮನ ಪಾದದಡಿಗೆ ಶಿರ ಬಾಗಿ
ಅಮ್ಮನ ಕೆಲಸದಲ್ಲಿ ನೆರವಾಗಿ
ಗಂಡನ ತೋಳುಗಳಿಗೆ ಬಲವಾಗಿ
ಹುಟ್ಟಿದ ಮನೆಗೂ ಹೋದ ಮನೆಗೂ
ಕೀರ್ತಿ ಪತಾಕೆಯಾಗಿ
ನಿನ್ನ ನೀನು ಗಂಧದ ಕೊರಡಂತೆ
ಜೀವ ತ್ಯಾಗವ ಮಾಡಿ
ನಿಸ್ವಾರ್ಥ ಸೇವೆಗೆ ಮುಡಿಪಾಗಿ
ಇಳೆಯಾಗಿ ವಸುಂಧರೆಯಾಗಿ
ನಮ್ಮ ಸಲಹುತ್ತಿರುವ ತಾಯಿಯೇ
ತಳೆದಿಹರು ನಿನಗಾಗಿ
ನಿನ್ನ ವಿರುದ್ಧವೇ ಧೋರಣೆಯ
ಹೆಣ್ಣು ನೀನು ಗಂಡು ನಾನು
ಎಂದೇಕೆ ಮೂದಲಿಸುವಿರಿ
ಎಲ್ಲ ರೂಪವ ತಾಳಿ ಸಲಹುವಳು ನಿಮ್ಮನ್ನು
ಹೆಣ್ಣಲ್ಲವೇ ಸರಿ
ಹೆಣ್ಣು ಗಂಡು ಸೇರಿ ಬಾಳ್ವೆ
ಸುಂದರ ಅಕ್ಷರಗಳಿರುವ ಹಾಳೆ
ಸಾಕು ನಿಲ್ಲಿಸಿರಿ ಆ ತಾರತಮ್ಯವ
ಮನ ತುಂಬಿ ಪೂಜಿಸಿರಿ
ತಾಳ್ಮೆ ಪ್ರೀತಿಯ ಅದಮ್ಯ ರೂಪವ
ಬಹಳ ಸುಂದರ ಭಾವ. ಲಯಬದ್ಧತೆಯೂ ಚೆನ್ನಾಗಿದೆ. ಎಲ್ಲಕ್ಕಿಂತ ಮುಖಯ್ವಾಗಿ, ಒಂದು ಹೆಣ್ಣಿನ ಪಾತ್ರ ಈ ಜಗದ್ವ್ಯಾಪಾರದಲ್ಲಿ ತುಂಬಾ ಚೆನ್ನಾಗಿ ಮೂಡಿಬಂದಿದೆ. ನಿರ್ಮಲ ಹೃದಯದ ನಿಮಗೆ ನಮೋ ನಮಃ
ಪ್ರತ್ಯುತ್ತರಅಳಿಸಿ