ಮನವೇಕೊ ಹಿಂದಿನ ನೆನಪುಗಳ
ಮೆಲುಕುಹಾಕುತ್ತಿರಲು
ಪ್ರೀತಿಯ ಮಾತುಗಳು ಸೃಷ್ಟಿಸಿದ
ಶಾಂತತೆ ನಗುವ ತರಲು.. ಭಾವಗಳ ಬಾಚಿ ತಬ್ಬಲು
ಇಷ್ಟು ಸಾಕಲ್ಲವೇ??
ಮನವೇಕೊ ಸೋತು ಹೈರಾಣವಾಗಿ
ಕಣ್ಣೀರ ಹೊರಹಾಕುತ್ತಿರಲು
ಮೆಲ್ಲನೆ ಕೈ ಹಿಡಿದು ಸಾಂತ್ವನ ಹೇಳಿದ
ನುಡಿಗಳು ಸಮಾಧಾನ ತರಲು .... ಛಲದ ಪಣ ತೊಡಲು
ಇಷ್ಟು ಸಾಕಲ್ಲವೇ ??
ಮನವೇಕೊ ಬಗೆ ಬಗೆಯಾಗಿ
ಪರಿಹಾರದ ದಾರಿಯ ಹುಡುಕುತ್ತಿರಲು
ಸುಲಭದ ದಾರಿಯು ಮನದಲಿ ಮೂಡಲು
ಸಣ್ಣನೆಯ ನಗುವು ವದನದಲಿ ತೋರಲು.... ಸಾಧನೆಯ ಕಹಳೆ ಮೊಳಗಲು
ಇಷ್ಟು ಸಾಕಲ್ಲವೇ ??
ಮನವೇಕೊ ಪದಗಳ ಜೋಡಿಸಿ
ಕವನವ ಹೊಸೆಯುತ್ತಿರಲು
ಸುಂದರ ಭಾವವು ಮನದಲ್ಲಿ ಪುಟಿದೇಳಲು
ಸಂತೃಪ್ತಿ ಭಾವ ಮೂಡಲು... ಸುಂದರ ಕವನ ರಚನೆಯಾಗಲು
ಇಷ್ಟು ಸಾಕಲ್ಲವೇ ??
ಮುದ್ದು ಕಂದಮ್ಮನ ಎತ್ತಿ
ಮುದ್ದಾಡುತ್ತಿರಲು
ಕೆಳಗೆ ಇಳಿಯ ಬಿಡಲು ಅದು ನಿಮ್ಮ
ಕೊರಳಲಿ ಬರ ಸೆಳೆಯಲು... ಪ್ರೀತಿಯ ಸೆಲೆ ಪಸರಲು
ಇಷ್ಟು ಸಾಕಲ್ಲವೇ ??
ಬಚ್ಚಿಟ್ಟ ಬೇಸರದ ಭಾವನೆಗಳು
ತನ್ನಿಂತಾನೆ ತೆರೆದು ಕೊಳ್ಳುತ್ತಿರಲು
ನವಿರಾದ ಭಾವನೆಗಳ ನರ್ತನದೊಂದಿಗೆ
ಒಂದು ಸಣ್ಣ ಹನಿಯು ಕಣ್ಣ ತೇವ ಮಾಡಲು.. ಪ್ರಪುಲ್ಲ ಮನವು ನಿಟ್ಟುಸಿರು ಬಿಡಲು
ಪ್ರೀತಿಯ ಬಯಸಿದ ಮನಕ್ಕೆ
ಇಷ್ಟು ಸಾಕಲ್ಲವೇ ??
ಓಹೋ! ಖಂಡಿತ ಸಾಕು ಕಣ್ರಿ :) :) :) :*
ಪ್ರತ್ಯುತ್ತರಅಳಿಸಿಚೆನ್ನಾಗಿದೆ. ಶುಭವಾಗಲಿ.
ಪ್ರತ್ಯುತ್ತರಅಳಿಸಿಒಳ್ಳೆಯ ಕವನ! ಹೀಗೇ ಬರೆಯುತ್ತ ಇರಿ!, ನಾವು ಒದುತ್ತಾ ಇರುತ್ತೇವೆ :)
ಪ್ರತ್ಯುತ್ತರಅಳಿಸಿNice poem Seema..all the best...
ಪ್ರತ್ಯುತ್ತರಅಳಿಸಿಎಲ್ಲರಿಗೂ ಧನ್ಯವಾದಗಳು :)
ಪ್ರತ್ಯುತ್ತರಅಳಿಸಿ