ಸೋಮವಾರ, ಮಾರ್ಚ್ 12, 2012

ಸತ್ಯದ ಅನಾವರಣ .......


ಭಾವಗಳ ಲೋಕದಲಿ
ಚಲಿಸುತಿರುವೆ ಹಾಯಾಗಿ
ಬೇಗ ಬಂದೆನ್ನ ಸೆಳೆಯಲಿ
ನಾ ಒಬ್ಬ ಏಕಾಂಗಿ

ಲೋಕ ರೂಢಿಗೆ ಮಾಡದಿರು
ಮನುಷ್ಯತ್ವವ ಆವಿ
ಈ ಲೋಕದ ಕಟ್ಟು ಪಾಡಿಗೆ
ನಲುಗಿದಂತ ಜೀವಿ

ಅನ್ಯಾಯ ನರ್ತನವು
ಹಾಳಾಗಿ ಹಳಸಿತದುವು
ನೀತಿ ಮಾರ್ಗಕೆ ಹಿಡಿ ನೀನು
ಹೆಜ್ಜೆ ಗೆಜ್ಜೆಯಾ ತಾಳವನು

ಬಟ್ಟ ಬಯಲಾಯಿತೆ ನಮ್ಮವರ ನಿಜ ಬಣ್ಣ
ಅಸತ್ಯದ ಕನ್ನಡಿಯಲಿ ತೋರಿಹುದೆ ಅಣ್ಣ
ಸತ್ಯವದು ಮೌನವನು ತಬ್ಬಿರಲು
ಮಾತಾಡಿಸಬಾರದೇ ಎ೦ಬಳಲು

ಇರ ಬೇಕು ವದನದಲಿ
ಸಹಸ್ರ ನಗುವಿನ ಜೋಲಿ
ಪ್ರೀತಿ ಪ್ರೇಮ ಸಹಕಾರವೇ
ನಮ್ಮ ಜೀವನವ ಜೀಕುವ ಜೋಕಾಲಿ

1 ಕಾಮೆಂಟ್‌:

  1. ಬದುಕು ಜೀಕುವ ಜೋಕಾಲಿ ಸಾಲುಗಳು ಸುಂದರವಾಗಿದೆ. ಹೀಗೆ ಬೇಕು ಭಾವಗಳನ್ನು ಜೀಕುವ ಪದಗಳಲ್ಲಿ. ಈ ಕೆಳಗಿನ ಸಾಲು ಅದ್ಭುತವಾಗಿದೆ.
    ಇರ ಬೇಕು ವದನದಲಿ
    ಸಹಸ್ರ ನಗುವಿನ ಜೋಲಿ
    ಪ್ರೀತಿ ಪ್ರೇಮ ಸಹಕಾರವೇ
    ನಮ್ಮ ಜೀಕುವ ಜೋಕಾಲಿ !

    ಪ್ರತ್ಯುತ್ತರಅಳಿಸಿ