ನಾಲ್ಕು ದಿನದ ಈ ಬಾಳ್ವೆಯಲಿ
ತುಸು ದೂರ ನಡೆದಿರುವೆ ಏಕಾಂಗಿ
ಅಲ್ಲಲ್ಲಿ ತಡವರಿಸಿದೆ ದಾರಿಯು ತೋಚದೆ
ಎದ್ದು ನಿಲ್ಲಲು ಪರಿ ಪರಿಯಲಿ ಹವಣಿಸಿದೆ
ಬರುತ್ತವೆ ನೋವು ಕಷ್ಟ ಕಾರ್ಪಣ್ಯಗಳು
ಜೀವನದ ಸುಗುಮ ಹಾದಿಗೆ ಕಲ್ಲು ತೊಡರಂತೆ
ಸ್ನೇಹ ಪ್ರೀತಿ ನಂಬಿಕೆಯ ಸೋಜಿಗಗಳು
ಸಾರ್ಥಕ ಬದುಕಿನ ಘಂಟೆ
ನೋವು ನಲಿವು ಹರುಷ ಕೀರ್ತಿ
ತುಂಬಿರಲು ಬಾಳು ಬಲು ಸೊಗಸು
ಮನ ತುಂಬಿ ನಿಸ್ವಾರ್ಥದಲಿ
ಎಲ್ಲೆಡೆ ನಗೆಯ ಹೊನಲು ಹರಿಸು
good one
ಪ್ರತ್ಯುತ್ತರಅಳಿಸಿ