( ಮನದಲ್ಲಿ ಮೂಡುತಿವೆ
ಖುಷಿಯ ರೇಖೆಗಳು
ನನ್ನನ್ನೇ ಮೂದಲಿಸುತ್ತಿವೆ
ಅದರ ಪ್ರಖರತೆಗಳು )
ಸಂಜೆಯ ಹೊನ್ನಿನ ಬಣ್ಣಕ್ಕೆ
ಸುಂದರ ನಗುವೊಂದು ಮೂಡಿತು
ಸುಂದರ ಹಾಡಿಗೆ
ಮನವು ಗುಣುಗುನಾಯಿಸಿತು
ಹಕ್ಕಿಗಳೆಲ್ಲವು ತಮ್ಮ ಗೂಡು ಸೇರಲು
ಭರದಲಿ ತವಕಿಸುತ್ತಿರೆ
ಮನದಲ್ಲಿದ್ದ ದುಗುಡ ತುಂಬಿದ ಯೋಚನೆಗಳು
ಬೆಚ್ಚನೆ ಮುದುಡಿ ಮಲಗುತ್ತಿವೆ
ತಂಗಾಳಿಯು ನನ್ನ ಸಂಗ ಬಯಸಿ
ನನ್ನ ಸಂತೋಷಕ್ಕೆ ಭಾಗಿಯಾಯಿತು
ಸುಂದರ ಸಂಧ್ಯಾಕಾಲ ನನ್ನ ಬಳಸಿ
ಬೆಳಗಿನ ಎಲ್ಲ ನೋವ ಮರೆಸಿತು
ನೋವ ಮರೆಸಿ ನಗುವ ಹರಿಸಿ
ಸೂರ್ಯನು ಮುಳುಗಿದನು
ನಾಳೆಯ ಮುಂಜಾವಿಗೆ ಪ್ರೇರೇಪಿಸಿ
ಮುಸ್ಸಂಜೆಯ ಸವಿಯ ತಿನಿಸಿದನು
ಮಂದಮಾರುತ ಗಾನ! ನವಿರಾದ ರಚನೆ. ಪದಗಳ ಹಿಡಿತ ಚೆನ್ನಾಗಿದೆ ಸೀಮಾ.
ಪ್ರತ್ಯುತ್ತರಅಳಿಸಿ