ಶುಕ್ರವಾರ, ಏಪ್ರಿಲ್ 27, 2012
ಮಂಗಳವಾರ, ಏಪ್ರಿಲ್ 24, 2012
ಕನಸುಗಳ ನೋವಿನ ಛಾಯೆ
ಮನದಲ್ಲಿ ಬುಗಿದೆದ್ದ ನೋವಿನ ನೆರಳಿಗೆ
ಮನವದುವು ಮುದುಡಿ ಮಮ್ಮಲು ಮರುಗಿದೆ
ಕಾಣಿಸುತಿಹುದೇ ಬರಿ ಕತ್ತಲು ಕಣ್ಣೆದುರಿಗೆ
ಅದ ಭ್ರಮಿಸಿ ಹೃದಯವು ಮೆದುವಾಗಿ ಕಂಪಿಸಿದೆ
ಬಿಟ್ಟು ಹೋದವೇಕೆ ನಾನಂದು ಕಂಡಿದ್ದ ಕನಸುಗಳು
ಕಣ್ಣೇರು ಸುರಿಸುತಿದೆ ಮನ ಕೊರಗಿ ಕೊರಗಿ
ಸಾಲದಾಯಿತೆ ನನ್ನೆಲ್ಲ ಪ್ರಯತ್ನಗಳು
ಅಡಗಿ ಕುಂತವೆ ಭಾವನೆಗಳು ಲೋಕಕ್ಕೆ ಹೆದರಿ
ಕೂಗಿ ಕರೆಯುತಿಹೆನು ಕನಸುಗಳ ಪುನಃ ನನ್ನೆಡೆಗೆ
ಅರಳಿಸಬೇಕಾಗಿದೆ ದುಗುಡ ತುಂಬಿದ ಮನವ
ಮತ್ತದೇ ಕನಸುಗಳು ಗಾಳಿಯಲಿ ತೇಲುತಿರೆ
ಬಿಡಲಾರೆ ನಿಮ್ಮನ್ನು ಜೀವನಕೆ ಅರ್ಥವನು ಕೊಡುವವರ
ಸೋಮವಾರ, ಏಪ್ರಿಲ್ 23, 2012
ಕನಸಿನೊಳು ಕನಸಾಗಿ ....
ನೂರಾರು ಆಲೋಚನೆಗಳು
ಲವಲವಿಕೆಯ ಬಂಧಗಳು
ಓಡೋಡಿ ಬರುತಲಿವೆ ನನ್ನಲ್ಲಿಗೆ
ಕಾಣದ ಮುಖಗಳು
ಕೇಳಿಸದ ಮಾತುಗಳು
ಕಚಗುಳಿಯ ಇಡುತಿವೆ ಮೆಲ್ಲಗೆ
ಬಂಧನಗಳ ತೆಕ್ಕೆಯಲಿ
ಮಾತುಗಳ ಅಕ್ಕರೆಯಲಿ
ಬೀಳುವೇನು ಎಂದೋ
ಎದೆಯಲ್ಲಿ ಸಣ್ಣ ಕಂಪನವು
ಕಣ್ಣಲ್ಲಿ ಹೊಸತನವು
ಗಬಕ್ಕನೆ ಹಿಡಿದಿಡುವುದೇ
ರಾತ್ರಿಯ ಕನಸುಗಳು
ತನ್ನಲ್ಲಿ ಅಳುತಿರಲು
ಮೂಡಿ ಬರಲಿಹುದೇ ಹೊಸ ಪುಳಕಗಳು
ಮಲಗುತಿವೆ ಕಣ್ಣ ರೆಪ್ಪೆಗಳು
ತುಟಿಯಲ್ಲಿ ತುಸುನಗುವು
ಜಾರಿ ಬಿದ್ದಿತೆ ಮುತ್ತ ಹನಿಗಳು
ಸಿಹಿಯಾದ ಕನಸುಗಳು ಬೀಳುತಿರಲು
ನೋವೆಲ್ಲ ಮಾಗಿರಲು
ಅಡಗಿದ ಪರದೆಯು ಸರಿಯುತಿರಲು
ಪಾತ್ರಧಾರಿಗಳು ನಾವೆಲ್ಲಾ
ಆಡಲೇ ಬೇಕು ಜೀವನದ ಹಗಲೆಲ್ಲ
ಕನಸುಗಳು ಬಂದೊಮ್ಮೆ
ಹೊಸ ಲೋಕಕ್ಕೆ ಎಳೆದೊಯ್ಯುತಿರಲು
ಭಾನುವಾರ, ಏಪ್ರಿಲ್ 22, 2012
ಶುಕ್ರವಾರ, ಏಪ್ರಿಲ್ 20, 2012
ಮಂಗಳವಾರ, ಏಪ್ರಿಲ್ 17, 2012
:)
ಸುತ್ತಲೂ ಪಸರಿಸಿದೆ ಕಣ್ಣಿನ ಕೆಳಗೆಲ್ಲ ಕಪ್ಪು
ಹೆಪ್ಪುಗಟ್ಟಿ ನಿಂತಿದೆ ಮನದಾಳದ ನೋವು
ಕಣ್ಣ ಹನಿಗಳೆಲ್ಲ ಬತ್ತು ಬೇಸಿಗೆಯ ಬರದ ಛಾಯೆ
ಬೇಗೆಯನು ಸಹಿಸಲಸಾಧ್ಯವು ಹರಿಸಿ ಬಿಡೊಮ್ಮೆ
ಕಣ್ಣಲ್ಲಿ ಸಂತಸದ ಹನಿಗಳ ಮಳೆ
ಅಗೋಚರ ಹಂಬಲ
ಶುಕ್ರವಾರ, ಏಪ್ರಿಲ್ 13, 2012
ತಪ್ಪು ನನ್ನದು
ಬುಧವಾರ, ಏಪ್ರಿಲ್ 11, 2012
ನಾನು-ನನ್ನ ಭಾವಗಳು
**********************
ಹೀಗೇಕೆ ಹಿಗ್ಗು ಮುಗ್ಗಾಗಿ
ಎಳೆಯುತ್ತಿರುವೆ ನನ್ನ
ಒಮ್ಮೊಮ್ಮೆ ನನ್ನನ್ನು
ಜಗ್ಗಿ ಬಿಡುವೆ ಬೀಳುವ ಮುನ್ನ
ಬಂದೆನ್ನ ಅಪ್ಪಿ ಬಿಡುವೆ
ಹೇಳದೆಯೇ ಕೇಳದೆಯೇ
ಕಣ್ಣಲ್ಲಿ ನೀರ ತುಂಬುವೆ
ಮೊಗದಲ್ಲಿ ನಗೆಯ ಜೊತೆಯೇ
ಬಾ ಎಂದಾಗ ಬರದೆ
ನನ್ನ ನೀ ಕಾಡುವೆ
ಕರೆಯದೆ ಬಂದು
ನನ್ನ ಜೊತೆ ನೀ ಆಡುವೆ
ನಿನ್ನ ಅಲೆಯ ಸುಳಿಗೆ ಸಿಕ್ಕ
ಹಾಳು ಬಿದ್ದ ಮರದ ಚೂರು
ನಿನ್ನ ಜೊತೆಯೇ ಎಳೆದೊಯ್ಯುವೆ
ನಿನ್ನ ಜೊತೆಯೇ ಸಾಗುವೆ
ನನ್ನ ಭಾವ ನನ್ನ ಜೊತೆ
ಮರೆತು ಬಿಡುವೆ ನನ್ನನೆ
ಬೇಡಿಕೊಂಬೆ ಬರದಿರಲಿ ವ್ಯಥೆ
ಇದುವೇ ನನ್ನ ಜೀವನದ ಗಾಥೆ
ಸೋಮವಾರ, ಏಪ್ರಿಲ್ 9, 2012
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)