ಮಂಗಳವಾರ, ಫೆಬ್ರವರಿ 28, 2012

ಹೊಸ-ಭಾವ


ಸೋಲಲ್ಲೂ ಗೆಲುವ ಕಾಣಲು
ಮನವೇಕೊ ನಸುಗನಸ ಕಾಣುತಿದೆ
ಅಳುವಲ್ಲೂ ನಗುವ ಪಸರಿಸಲು
ಮನವೇಕೊ ಹೆಣಗಾಡುತಿದೆ

ಭಾವಗಳು ಮತ್ತೆ ಜೀವ
ತಂತಿಗಳ ಜೋಡಿಸುತಿರಲು
ನವ ರಾಗದ ಶ್ರುತಿಯ
ಹಿಡಿತ ಸಾಧಿಸುತಿರಲು

ಹಳೆ ರಾಗಗಳ ಭಾವೈಕ್ಯದಲಿ
ಹೊಸ ರಾಗವು ಹುಟ್ಟಲು
ಲೋಕಾರ್ಪಣೆಗೆ
ಅಣಿಗೊಳ್ಳುತ್ತಿರಲು

2 ಕಾಮೆಂಟ್‌ಗಳು:

  1. ಒಳ್ಳೆಯ ಭಾವಗೀತೆಯ ಲಕ್ಷಣ ಹೊಂದಿರುವ ರಚನೆ.

    ನಿಮ್ಮ ಇಡೀ ಬ್ಲಾಗನ್ನು ಓದಿ ಮತ್ತೆ ಪ್ರತಿಕ್ರಿಯಿಸುತ್ತೇನೆ.

    ನನ್ನ ಬ್ಲಾಗಿಗೆ ಸ್ವಾಗತ.

    ಪ್ರತ್ಯುತ್ತರಅಳಿಸಿ