ಶನಿವಾರ, ಸೆಪ್ಟೆಂಬರ್ 3, 2016

ಚೌತಿಯ ನೆನಪು ಮರುಕಳಿಸಿದಾಗ


ಶ್ರಾವಣ ಮಾಸ ಕಳೆದು ಬರುವ ಹಬ್ಬವೇ ಗಣೇಶ ಚತುರ್ಥಿ . ಹಬ್ಬದ ಸಡಗರ ಸಂಭ್ರಮ ನೆನಪಾಗದೆ ಇರದು. ೨೫ ವರ್ಷದಲ್ಲೂ ಎಂದಿಗೂ ತಪ್ಪಿಸದ ಕಾರಣವೋ ಏನೋ ತಿಳಿಯದು.  ಎಷ್ಟೋ ಸಂಭ್ರಮದ  ಎಳೆಗಳು ವಿವರಿಸುವಲ್ಲಿ  ಬಿಟ್ಟು ಹೋಗಿರುವ ಸಾಧ್ಯತೆ ಇದೆ. ! ನೆನಪಾದ ಹಾಗೆ ಜೋಡಿಸುವೆ :)

ನನ್ನ ಹುಟ್ಟೂರು ಹೊನ್ನಾವರ ತಾಲೂಕಿನ ಕರ್ಕಿ ಎ೦ಬ ಗ್ರಾಮ. ಊರು ಚಿಕ್ಕದಾದರು ಊರಿನ ವಿಶೇಷಗಳು ಬಹಳ. ಅ೦ತಹ ವಿಶೇಷಗಳಲ್ಲಿ ಚೌತಿ ಹಬ್ಬದ ಆಚರಣೆ ಮಹತ್ವದ್ದು. ಕೆಲಸ ನಿಮಿತ್ತ ಬೇರೆ ಸ್ಥಳವಾಸಿಗಳಾದರೂ ಹಬ್ಬದ ಆಚರಣೆಗೆ ಕರ್ಕಿಗೆ ಬರುವುದು ವಾಡಿಕೆ.ಹಬ್ಬದ ಸಮಯದಲ್ಲಿ ಬಸ್ ದರ ಗಗನಕ್ಕೇರುವುದ೦ತು ನಿಜ.

ಎಲ್ಲರ ಮನೆಯಲ್ಲೂ ಗಣಪತಿ ಬೊಪ್ಪ ಆವ್ಹಾಹನಗೊಳ್ಳುತ್ತಾನೆ. ಚವತಿಯ ಹಿ೦ದಿನ ದಿನ ಗಣಪನ ಕೂರಿಸುವ ಜಾಗವು ಫಲಾವಳಿಯೊ೦ದಿಗೆ ಸಿ೦ಗಾರಗೊಳ್ಳುತ್ತದೆ. ಫಲಾವಳಿ ಅ೦ದರೆ ಹೀಗಿರುವುದು


ಕರ್ಕಿಯಲ್ಲಿ ಬಹು ಚ೦ದದ ಗಣಪತಿ ಮೂರ್ತಿ  ತಯಾರಿಕೆ ಬಹಳ ಜನಪ್ರಿಯತೆ ಪಡೆದುಕೊ೦ಡಿದೆ.



ಚಿಕ್ಕಪ್ಪ ಅಜ್ಜ ತಮ್ಮ ತ೦ಗಿಯರೊಡನೆ ಹಬ್ಬಕ್ಕೆ ಸಜ್ಜುಗೊಳಿಸುವುದೆ ಸಡಗರ. ಚೌತಿಯ ದಿನ ಬೆಳಿಗ್ಗೆ ಎದ್ದು ಗಣಪತಿಯ ಮನೆಗೆ ತರುವುದು. ವಾಮನ ಎ೦ಬಾತ ಪ್ರತಿ ವರುಷಕ್ಕು ನಮ್ಮ ಮನೆಯ ಗಣಪತಿ ತರುವಾಗ ನಮ್ಮ ಜೊತೆಯಾಗುತ್ತಾನೆ.



ಕರ್ಕಿಯಲ್ಲಿ ಸಾಲಾಗಿ ಮನೆಗಳು. ಕೇರಿ ಅಂತ ಪ್ರಖ್ಯಾತಿ. ಕೆಲವರ ಮನೆಯಲ್ಲಿ ಗಣೇಶ ೧ ದಿನ ಪೂಜೆಗೊಂಡರೆ ಉಳಿದವರ ಮನೆಯಲ್ಲಿ ೨ ಅಥವಾ ೫ ದಿನಗಳ ಪೂಜೆ. ಐದನೇ ದಿನ ಕರ್ಕಿ ಶಾಲೆ ಹತ್ತಿರ ಎಲ್ಲ ಗಣಪತಿಗಳನ್ನು ಒಟ್ಟಿಗೆ ಕೂರಿಸಿ ಗಣಪತಿ ವಿಸರ್ಜನೆಯನ್ನು ಹೊಳೆಯಲ್ಲಿ ಮಾಡುವುದು ವಾಡಿಕೆ. ಅದನ್ನು ನೋಡುವುದೇ ಅವಿಸ್ಮರಣೀಯ.

ಕೇರಿ ಗಣಪನ ವಿಸರ್ಜನೆ ಚತುರ್ಥಿಯ ರಾತ್ರಿ ವೇಳೆ. ಜಾಗಟೆ ಮಂತ್ರ ಪೂಜೆಯ ಮೆರುಗನ್ನು ಹೆಚ್ಚಿಸುವುದು. ಅವರವರ ಮನೆಯ ಬಾವಿಯಲ್ಲಿ ಗಣಪನ ವಿಸರ್ಜನೆ . ಗಣಪತಿ ಬೊಪ್ಪ ಮೊರೆಯ ಎಂಬ ಕೂಗು ಹಬ್ಬಕ್ಕೆ ಆ ವರ್ಷದ ಆಚರಣೆಗೆ ವಿರಾಮ ನೀಡುತ್ತದೆ.

ಸಾರ್ವಜನಿಕ ಗಣಪತಿ ಸ್ಥಾಪನೆ ಅಲ್ಲಿಯ ಅಲಂಕಾರ ವರುಷ ವರುಷಕ್ಕೂ ಹೊಸ ಬಗೆಯ ಪ್ರಯೋಗ.
ಪೂಜೆಗೆ ಆರತಿ ತಟ್ಟೆ , ರಂಗೋಲಿ ಬಿಡಿಸುವುದು , ಹಬ್ಬದ ಅಡಿಗೆಗೆ ಅಜ್ಜಿ ಅಮ್ಮ ಚಿಕ್ಕಮ್ಮರೊಡನೆ ಸಹಾಯ ಮಾಡುವುದು ಚೌತಿ ವಿಶೇಷಗಳು . ಕದ್ದು ಮುಚ್ಚಿ ಮೊದಲೇ ತಯಾರಿಸಿಟ್ಟ ಚಕ್ಕುಲಿ ಅತ್ರಾಸ ವಡೆ ತಿನ್ನುವುದು.;)  

ಇಷ್ಟೆಲ್ಲ ವಿಶೇಷಗಳನ್ನು ಒಳಗೊಂಡ ಹಬ್ಬವನ್ನು ಮರೆಯಲು ಸಾಧ್ಯವೇ ?