ಸೂಚಕ
----------
ದಾರಿಹೋಕನೊಬ್ಬ
ಎಸೆದನೊಂದು ಬೀಡಿಯ ತುಂಡು
ನನ್ನ ಆಯಸ್ಸು ತೀರೀತು
ನಿನ್ನ ಆಯಸ್ಸಿನೊಂದಿಗೆ ಎಂದು
ಗಹಗಹಿಸಿ ನಕ್ಕಂತೆ ಭಾಸವಾಯಿತು
ಬಿದ್ದ ಬೆಂಕಿಯ ಚೂರನ್ನು ಕಂಡು
ಸಾಮಾನ್ಯ ಜ್ಞಾನ
-------------------
ಇರಲು ನಿನ್ನೊಂದಿಗೆ ಸದಾ
ನೀತಿ ನಿಯಮ ಗೌರವ ಸಜ್ಜನಿಕೆ
ಬೇಕಿಲ್ಲ ಇನ್ನೇನೂ ನಿನ್ನ
ಗುಣ ವಿಶೇಷಗಳ ಅಳೆಯುವ ಪ್ರನಾಳಿಕೆ
ಪ್ರೀತಿ
--------
ಸಂಧ್ಯಾ ರಶ್ಮಿಯ ಪ್ರಕರತೆ
ಕೆಂಪು ಮುಗಿಲ ಒಯ್ಯಾರ
ತಣ್ಣನೆಯ ಗಾಳಿಗೆ
ಹಸಿರು ಎಲೆಗಳ ಒಯ್ದಾಟ
ಕಟ್ಟಲು ಆವರಿಸುತ್ತಿದೆ
ಹಕ್ಕಿಗಳ ಮನೆ ತಲುಪುವ ಹಾರಾಟ
ಮನ ಬಯಸಿದ ಪ್ರೀತಿಗೆ
ಸಂಪ್ರೀತಗೊಂಡಿತು ಆಲಾಪ
ತಲ್ಲೀನವಾಯಿತು ಸೊಬಗ ಸೌಂದರ್ಯಕೆ
ಪೃಕ್ರತಿಯ ಸುಂದರ ಮಡಿಲು